ಹಳೆಯಂಗಡಿ : ಎಲ್.ಪಿ.ಜಿ ವಿತರಣೆ

ಕಿನ್ನಿಗೋಳಿ: ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದ ಚಿತ್ರಣವೆ ಬದಲಾಗಿದೆ. ದೇಶದಲ್ಲಿ ಐದು ಕೋಟಿ ಎಲ್.ಪಿ,ಜಿ ಗೆ ನೋಂದಣಿಯಾಗಿದ್ದು ಸುಮಾರು ಒಂದು ಕೋಟಿ ಎಲ್.ಪಿ.ಜಿ ವಿತರಣೆ ಮಾಡಲಾಗಿದೆ. ಎಲ್ಲಾ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಹಳೆಯಂಗಡಿ ಜಾರಂದಾಯ ದೈವಸ್ಥಾನದ ಸಭಾಭವನದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಎಲ್.ಪಿ.ಜಿ ವಿತರಣೆಯನ್ನು ನೆರವೇರಿಸಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಮಾತನಾಡಿ ಉಜ್ವಲ ಯೋಜನೆಯಿಂದ ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ, ಅನೇಕ ಕುಟುಂಬಗಳು ಎಲ್.ಪಿ .ಜಿ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರು ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮರೊಟ್ಟು, ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲಾಧ್ಯಕ್ಷ ಈಶ್ವರ್ ಕಟೀಲ್, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಗ್ರಾಮ ಸಮಿತಿಯ ಉಪಾಧ್ಯಕ್ಷ ಮನೋಜ್ ಹಳೆಯಂಗಡಿ, ಶೋಭೇಂದ್ರ ಸಸಿಹಿತ್ಲು, ಗ್ಯಾಸ್ ಏಜೆನ್ಸಿ ಮಾಲಕ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06021903

Comments

comments

Comments are closed.

Read previous post:
Kinnigoli-06021902
ಬಸ್ ಚಾಲಕ ನಿರ್ವಾಹಕರ ಸಂಘ ಅಧ್ಯಕ್ಷ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಬಸ್ ಚಾಲಕ ನಿರ್ವಾಹಕರ ಸಂಘದ ಸಭೆಯು ಕಿನ್ನಿಗೋಳಿ ನೇಕಾರ ಸೌಧ ಸಭಾಭವನದಲ್ಲಿ ಜರಗಿದ್ದು ಅಧ್ಯಕ್ಷರಾಗಿ ರಮೇಶ್ ಪಕ್ಷಿಕೆರೆ ಆಯ್ಕೆಯಾದರು. ಗೌರವಾಧ್ಯಕ್ಷ ಭಾಸ್ಕರ್ ಪೂಜಾರಿ, ಉಪಾಧ್ಯಕ್ಷರು ಶ್ರೀಕಾಂತ್...

Close