ಪಟ್ಟೆ : ರಿಕ್ಷಾ ನಿಲ್ದಾಣ ಮೇಲ್ಚಾವಣಿ ಉದ್ಘಾಟನೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಪಟ್ಟೆ ಬಳಿ 1.5ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ಮತ್ತು ಇಂಟರ್ ಲಾಕ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಉದ್ಘಾಟಿಸಿದರು. ಈ ಸಂದಂರ್ಭ ಕಳೆದ ತಿಂಗಳು ಶಾಂಭವಿ ನದಿಗೆ ವಾಹನ ಬಿದ್ದಾಗ ಅದರಲ್ಲಿದ್ದ ಮೂವರನ್ನು ರಕ್ಷಿಸಿದ ಸ್ಥಳೀಯರಾದ ಅಶೋಕ್ ಮೂಲ್ಯ, ಗುಣಪಾಲ ಮೂಲ್ಯ, ಮಾರ್ಕ್ ವಾಸ್, ತಾರಾನಾಥ ಶುಂಠಿಪಾಡಿ, ಗಿರೀಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಉಪಾಧ್ಯಕ್ಷೆ ಸುಂದರಿ, ಆಟೋ ಚಾಲಕ ಮಾಲಕ ಸಂಘದ ಗೌರಾವಾಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಅಧ್ಯಕ್ಷ ಹಾಜಬ್ಬ, ಪಂಚಾಯಿತಿ ಸದಸ್ಯರಾದ ಸುಧಾಕರ ಸಾಲಿಯಾನ್ ಸಂಕಲಕರಿಯ, ರವೀಂದ್ರ ಪೂಜಾರಿ ಶಶಿಕಾಂತ್, ಡೆನಿಸ್ ಮತ್ತಿತರರು ಉಪಸ್ಥಿತರಿದ್ದರು. Kinnigoli-08021902

Comments

comments

Comments are closed.

Read previous post:
Kinnigoli-08021901
ಕೆಐಸಿಟಿ, ಎಂಸಿಟಿಸಿ 12 ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಜೀವನದ ಸುಲಭ ಯಶಸ್ಸಿಗೆ ಮೂರು ಸೂತ್ರಗಳನ್ನು ಅಳವಡಿಸಿಕೊಂಡಾಗ ಸಾಧನೆಯ ಶಿಖರವೇರಲು ಸಾಧ್ಯ ಎಂದು ಉದ್ಯಮಿ ಮುಬೀದ್ ಎಚ್. ಕೈಕಂಬ ಹೇಳಿದರು. ಕಿನ್ನಿಗೋಳಿ ನೇಕಾರ ಸೌಧದಲ್ಲಿ ನಡೆದ ಕೆಐಸಿಟಿ...

Close