ಕೆಐಸಿಟಿ, ಎಂಸಿಟಿಸಿ 12 ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಜೀವನದ ಸುಲಭ ಯಶಸ್ಸಿಗೆ ಮೂರು ಸೂತ್ರಗಳನ್ನು ಅಳವಡಿಸಿಕೊಂಡಾಗ ಸಾಧನೆಯ ಶಿಖರವೇರಲು ಸಾಧ್ಯ ಎಂದು ಉದ್ಯಮಿ ಮುಬೀದ್ ಎಚ್. ಕೈಕಂಬ ಹೇಳಿದರು.
ಕಿನ್ನಿಗೋಳಿ ನೇಕಾರ ಸೌಧದಲ್ಲಿ ನಡೆದ ಕೆಐಸಿಟಿ ಮತ್ತು ಎಂಸಿಟಿಸಿ ಕಿನ್ನಿಗೋಳಿ-ಕೈಕಂಬ- ಪಡುಬಿದ್ರಿ ಶಾಖೆಗಳ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಜೀವನದಲ್ಲಿ ಯಶಸ್ಸು ಕಾಣಲು ಮೊದಲು ಕನಸು ಕಾಣಬೇಕು, ಬಳಿಕ ಕನಸಿಗೆ ಯೋಜನೆ ರೂಪಿಸಬೇಕು, ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಆದ್ದರಿಂದ ಜೀವನದಲ್ಲಿ ಯಾವತ್ತಿದ್ದರೂ ಕನಸು, ಯೋಜನೆ, ಕಾರ್ಯರೂಪ ಈ ಮೂರು ಸೂತ್ರಗಳನ್ನು ಮರೆಯಬಾರದು ಎಂದು ಹೇಳಿದರು.
ಈ ಸಂದರ್ಭ ಉದಯೋನ್ಮುಖ ಬಹುಮುಖ ಪ್ರತಿಭೆ ಶೈಲೇಶ್ ಮೈಲೊಟ್ಟು ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕ ಹರ್ಷದ್ ಎಂ.ಎ. ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಪ್ರಿನ್ಸಿಪಾಲ್ ನವೀನ್ ವೈ. ಉಪಸ್ಥಿತರಿದ್ದರು.
ಸುರೇಖಾ ಸ್ವಾಗತಿಸಿ, ಗಾಯತ್ರಿ ವಂದಿಸಿದರು. ಇರ್ಷಾದ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

Kinnigoli-08021901

Comments

comments

Comments are closed.

Read previous post:
Kinnigoli-06021906
ಐಕಳ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

ಕಿನ್ನಿಗೋಳಿ : ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದಿಂದ ಕೊಡಮಾಡುವ ಸೈಕಲ್‌ನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು,...

Close