ಹಳೆಯಂಗಡಿ ವಿನಾಯಕ ಮಠ ಅಷ್ಟಬಂಧ ಪ್ರತಿಷ್ಠೆ

ಕಿನ್ನಿಗೋಳಿ: ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠದ ಶ್ರೀ ದುರ್ಗಾಪರಮೆಶ್ವರೀ ಮತ್ತು ಶ್ರೀ ವಿನಾಯಕ ದೇವರುಗಳ ಅಷ್ಟಬಂಧ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕವು ಫೆ.10-17ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಮಂಗಳವಾರ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿ ಪೂಜೆ, ಅಂಕುರ ಪೂಜೆ, ಅಗ್ನಿ ಜನನ, ನವಗ್ರಹ ಹೋಮ ಹಾಗೂ ಅನ್ನಸಂತರ್ಪಣೆ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂಧರ್ಬ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ, ಸೂರ್ಯಕುಮಾರ್, ಗೌರವಾಧ್ಯಕ್ಷ ಬಿ.ಚಂದ್ರ ಕುಮಾರ್, ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠದ ಮೊಕ್ತೇಸರ ದಿವಾಕರ ಆಚಾರ್ಯ, ಕೋಶಾಧಿಕಾರಿ ಗಜೇಂದ್ರ ಕುಮಾರ್, ಕಾರ್ಯದರ್ಶಿ ತುಕರಾಮ್ ಆಚಾರ್ಯ, ಗುರುಸೇವಾ ಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಮಧು ಆಚಾರ್ಯ, ಉದ್ಯಮಿಗಳಾದ ಮಹೇಶ್ ಆಚಾರ್ಯ, ಪೃಥ್ವೀರಾಜ ಆಚಾರ್ಯ ಮತ್ತಿತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

Kinnigoli-12021904

Comments

comments

Comments are closed.

Read previous post:
Kinnigoli-12021903
ಗೋಳಿಜೋರ: ಕುರ್ಜಿ, ಟೇಬಲ್ ಹಸ್ತಾಂತರ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಶೇಕಡಾ 25 ನಿಧಿಯ ಅನುದಾನದಲ್ಲಿ ಗೋಳಿಜೋರ ಹರಿಹರ ಶ್ರೀ ರಾಮ ಭಜನಾ ಮಂದಿರಕ್ಕೆ ಕುರ್ಜಿ ಹಾಗು ಟೇಬಲ್ ಗಳನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ...

Close