ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘ

ಕಿನ್ನಿಗೋಳಿ: ಸಮಾಜ ಸಂಘಟನೆಗಳು ಸಮಾಜದ ವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಣಕ್ಕೆ ಸಹಾಯ, ಸಾಧಕರನ್ನು ಗೌರವಿಸಿದಾಗ ಸಮಾಜದ ಸಂಘಟನಾ ಶಕ್ತಿ ಹೆಚ್ಚುತ್ತದೆ ಎಂದು ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ ಹೇಳಿದರು.
ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದಿಂದ ಭಾನುವಾರ ಪಾವಂಜೆ ಶ್ರಿ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆದ ವಿವಿಧ ಸಾಮಾಜಿಕ ಚಟುವಟಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇವಾಡಿಗ ಯುವ ವೇದಿಕೆ, ಮಹಿಳಾ ವೇದಿಕೆ ಹಾಗೂ ದೇವಾಡಿಗ ಸೇವಾ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಶನೀಶ್ವರ ಪೂಜೆ ನಡೆಯಿತು.
ಬ್ರಹ್ಮಾವರ ದೇವಾಡಿಗ ಸಂಘದ ಅಧ್ಯಕ್ಷ ಸೂರಾಲು ಶಂಭು ಶೇರಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಬಾರ್ಕೂರು ಬಿ. ಜನಾರ್ಧನ ದೇವಾಡಿಗ, ನರಸಿಂಹ ಬಿ. ದೇವಾಡಿಗ ಉಡುಪಿ, ಮನಪಾ ಮೇಯರ್ ಭಾಸ್ಕರ ಮೊಯಿಲಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾನಿಲ್ ಅವರನ್ನು ಸನ್ಮಾನಿಸಲಾಯಿತು.
ನಾದಸ್ವರ ವಾದಕ ರವಿ ದೇವಾಡಿಗ ಹಳೆಯಂಗಡಿ ಹಾಗೂ ಹಿರಿಯ ಕೃಷಿಕರಾದ ಬಾಲಕೃಷ್ಣ ದೇವಾಡಿಗ ಪಂಜ ಅವರನ್ನು ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಿನ್ನಿಗೋಳಿ ದಿ.ಉಮ್ಮಕ್ಕ ಮೊಯಿಲ್ದಿ ಸ್ಮರಣಾರ್ಥ ಯಾದವ ದೇವಾಡಿಗ ಅವರು ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿಯನ್ನು ವಿತರಿಸಿದರು. ದಿ.ಬಿ.ಜಿ. ದೇವಾಡಿಗ, ದಿ. ಕಮಲ ಮತ್ತು ಕೊರಗ ದೇವಾಡಿಗ ಸ್ಮರಣಾರ್ಥ ದಾಮೋದರ್ ದೇವಾಡಿಗ, ದಿ. ಶೀನ ಬಿ. ಶ್ರಿಯಾನ್ ಸ್ಮರಣಾಥ ಜನಾರ್ಧನ್ ಪಡುಪಣಂಬೂರು, ಹಾಗೂ ಜಂಟಿ ಸಂಘದಿಂದ ವಿವಿಧ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ರಾಜ್ಯ ಸರ್ಕಾರಿ ಅರಣ್ಯ ಇಲಾಖಾ ನೌಕರರ ಮಹಾಮಂಡಳಿಯ ಅಧ್ಯಕ್ಷ ರಘುರಾಮ ದೇವಾಡಿಗ ಶಿವಮೊಗ್ಗ, ಬೆಂಗಳೂರು ನಾಗಮಂಗಲ ರೋಟರಿ ಕ್ಲಬ್ ಅಧ್ಯಕ್ಷ ರಮೇಶ್ ವಂಡ್ಸೆ, ಉಡುಪಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಗಣೇಶ್ ದೇವಾಡಿಗ, ಕೃಷ್ಣ ದೇವಾಡಿಗ ಬೆಂಗಳೂರು, ಪಾವಂಜೆ ದೇವಾಡಿಗ ಸಂಘದ ಅಧ್ಯಕ್ಷ ಅಶೋಕ್ ಪಾವಂಜೆ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ದೇವಾಡಿಗ, ಕಟ್ಟಡ ಸಮಿತಿಯ ಅಧ್ಯಕ್ಷ ಪರಮೇಶ್ವರ್ ಪಿ., ಯುವ ವೇದಿಕೆಯ ಅಧ್ಯಕ್ಷ ಜೀವನ್‌ಪ್ರಕಾಶ್ ಕಾಮೆರೊಟ್ಟು, ಮಹಿಳಾ ವೇದಿಕೆಯ ಅಧ್ಯಕ್ಷೆ ವಿಮಲ ಕೆ. ದೇವಾಡಿಗ, ದೇವಾಡಿಗ ಸೇವಾ ಟ್ರಸ್ಟ್‌ನ ಅಧ್ಯಕ್ಷ ರಮೇಶ್ ದೇವಾಡಿಗ, ಜನಾರ್ಧನ ಪಡುಪಣಂಬೂರು, ತುಳಸಿ ಸತೀಶ್ ಇಂದಿರಾನಗರ, ರಮೇಶ್ ದೇವಾಡಿಗ ತೋಕೂರು, ಸತೀಶ್ ಎನ್. ಇಂದಿರಾನಗರ, ಜಯಶ್ರಿ ಯಾದವ ದೇವಾಡಿಗ, ಜಗದೀಶ್ ಫಲಿಮಾರ್, ಮಂಜುಳಾ ಸುಬ್ರತ್, ಶೋಭಾ ಸೋಮನಾಥ್, ಯಾದವ ದೇವಾಡಿಗ ಉಪಸ್ಥಿತರಿದ್ದರು.

Kinnigoli-12021905

Comments

comments

Comments are closed.

Read previous post:
Kinnigoli-12021904
ಹಳೆಯಂಗಡಿ ವಿನಾಯಕ ಮಠ ಅಷ್ಟಬಂಧ ಪ್ರತಿಷ್ಠೆ

ಕಿನ್ನಿಗೋಳಿ: ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠದ ಶ್ರೀ ದುರ್ಗಾಪರಮೆಶ್ವರೀ ಮತ್ತು ಶ್ರೀ ವಿನಾಯಕ ದೇವರುಗಳ ಅಷ್ಟಬಂಧ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕವು ಫೆ.10-17ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಮಂಗಳವಾರ ಗುರುಗಣಪತಿ ಪೂಜೆ,...

Close