ಕಲಾವಿದರನ್ನು ಗುರುತಿಸಿದರೆ ಕಲೆ ಬೆಳೆದಂತೆ

ಕಿನ್ನಿಗೋಳಿ: ಯಕ್ಷಗಾನ ಭಾರತದ ಶ್ರೇಷ್ಠ ಕಲೆ, ಇಂದು ಎಷ್ಟೋ ಕುಟುಂಬಗಳು ಯಕ್ಷಗಾನ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದೆ. ಕಲಾವಿದರನ್ನು ಗುರುತಿಸಿದರೆ ಕಲೆಯನ್ನು ಬೆಳೆಸಿದಂತೆ ಎಂದು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಹೇಳಿದರು
ಉಲ್ಲಂಜೆ ಕೊರಗಜ್ಜ ಮಂತ್ರದೇವತೆ ಸನ್ನಿಧಿಯಲ್ಲಿ ಬಪ್ಪನಾಡು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಯಕ್ಷಗಾನ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಗುಡ್ಡಪ್ಪ ಪಂಜ, ಕಡಬ ರಾಮಚಂದ್ರ ರೈ, ದಿನೇಶ್ ಕೋಡಪದವು, ಹಾಗು ಯಕ್ಷಗಾನ ಸಂಚಾಲಕ ವಿನೋದ್ ಬಜ್ಪೆ ಅವರನ್ನು ಸನ್ಮಾನಿಸಲಾಯಿತು.
ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಜಯರಾಮ ಮುಕ್ಕಾಲ್ದಿ, ದೇವಿಪ್ರಸಾದ್ ಶೆಟ್ಟಿ, ಶ್ರೀಧರ ಆಳ್ವ ಮಾಗಂದಡಿ, ಯಶೋಧರ ಶೆಟ್ಟಿ, ಧರ್ಮದರ್ಶಿ ಹರೀಶ್ ಪೂಜಾರಿ, ವಸಂತ ಪೂಜಾರಿ, ಸುಮೀತ್ ಕುಮಾರ್, ತಾರಾನಾಥ ಅಮೀನ್, ನಿತೀನ್, ರತನ್, ಪ್ರಕಾಶ್ ಆಚಾರ್ಯ, ಗಣೇಶ್, ಯಕ್ಷಿತ್, ರೋಹಿತ್, ಪ್ರವೀಣ್, ಸುಧೀರ್, ಸಂತೋಷ್, ಸೀತರಾಮ, ಸತೀಶ್, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-12021902

Comments

comments

Comments are closed.

Read previous post:
Kinnigoli-12021901
ಹಳೆಯಂಗಡಿ ಕದಿಕೆ ಉರೂಸ್

ಕಿನ್ನಿಗೋಳಿ: ಪ್ರೀತಿ ಸೌಹಾರ್ಧತೆಯ ಜೀವನ ನಮ್ಮದಾಗಬೇಕು. ಎಂದು ಹಳೆಯಂಗಡಿ ಜುಮ್ಮಾ ಮಸೀದಿ ಸಾಗ್ ಖತೀಬ ಬಹು. ಎ.ಎಮ್. ಅಬ್ದುಲ್ಲಾ ಮದನಿ ಹೇಳಿದರು. ಹಳೆಯಂಗಡಿ ಕದಿಕೆ ಹಝ್ರತ್ ಸೈಯದ್ ಮೌಲನಾ...

Close