ಸಮಾಜ ಮುಖಿ ಚಿಂತನೆಗಳಿಂದ ಸಮಾಜದ ಏಳಿಗೆ

ಕಿನ್ನಿಗೋಳಿ: ದೈವಸ್ಥಾನ ಹಾಗೂ ದೇವಳಗಳು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ಸಮಾಜ ಮುಖಿ ಚಿಂತನೆಗಳಿಂದ ಮುನ್ನಡೆದಾಗ ಸಮಾಜದ ಏಳಿಗೆ ಸಾಧ್ಯ ಎಂದು ಧಾರ್ಮಿಕ ಮುಖಂಡ ವಿದ್ವಾನ್ ಪಂಜ ಬಾಸ್ಕರ ಭಟ್ ಹೇಳಿದರು.
ಪಂಜ- ಕೊಯಿಕುಡೆ ಶ್ರೀ ಹರಿಪಾದೆ ಧರ್ಮದೈವ ಜಾರಂತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ದೈವಸ್ಥಾನದ ಮೊಕ್ತೇಸರ ನಲ್ಯಗುತ್ತು ಗುತ್ತಿನಾರ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಶಿಕ್ಷಣ ಕ್ಶೇತ್ರದಲ್ಲಿ ಸಾಧನೆಗೈದ ಪ್ರಾಪ್ತಿ, ಪ್ರತೀಕ್, ಆಸೀಫಾ, ಮನೀಶ್, ದೀಕ್ಷಿತಾ, ಜ್ಯೋತಿ, ರಿತೀಶ್, ಹರ್ಷೀತಾ, ಪೂಜಾ, ಗೋಕುಲ್, ರಕ್ಷೀತಾ, ವಿಘ್ನೇಶ್ ವಿ. ಉಡುಪ, ಶ್ರೇಯ ಆರ್. ಶೆಟ್ಟಿ ಅವರನ್ನು ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.
ಪಂಜದ ಗುತ್ತು ವಿಶ್ವನಾಥ ಶೆಟ್ಟಿ, ಪಂಜ ವಾಸುದೇವ ಭಟ್, ಪ್ರಕಾಶ್ ಶೆಟ್ಟಿ ನಲ್ಯಗುತ್ತು ಉಪಸ್ಥಿತರಿದ್ದರು. ಉಮೇಶ್ ದೇವಾಡಿಗ ಪಂಜ ಕಾರ್ಯಕ್ರಮ ನಿರೂಪಿಸಿದರು.

Kinnigoli-13021903

Comments

comments

Comments are closed.

Read previous post:
Kinnigoli-13021902
ಗೋಳಿಜೋರ ಭಜನಾಮಂಗಲೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಗೋಳಿಜೋರ ಶ್ರೀ ಹರಿಹರ ಭಜನಾ ಮಂದಿರದಲ್ಲಿ ಭಜನಾಮಂಗಲೋತ್ಸವವನ್ನು ಉದ್ಯಮಿ ಲಕ್ಷ್ಮಣ ಸಾಲ್ಯಾನ್ ಉದ್ಘಾಟಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ವೆಂಕಪ್ಪ, ಉಮೇಶ್...

Close