ಮಹಿಳೆಯರು ಸಂಸ್ಕಾರಯುತವಾಗಿ ಬಾಳಬೇಕು

ಕಿನ್ನಿಗೋಳಿ: ಜೀವನದಲ್ಲಿ ಮಹಿಳೆಯರು ಸಂಸ್ಕಾರಯುತವಾಗಿ ಬಾಳಬೇಕು ಎಂದು ಸಮಾಜ ಸೇವಕಿ ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಶಾಂಭವಿ ಶೆಟ್ಟಿ ಹೇಳಿದರು.
ಏಳಿಂಜೆ ಲಕ್ಷೀ ಜನಾರ್ಧನ ಮಹಾಗಣಪತಿ ದೇವಳದ ವಠಾರದಲ್ಲಿ ನಡೆದ ಏಳಿಂಜೆ ಶ್ರೀ ದೇವಿ ಯುವತಿ ಮತ್ತು ಮಹಿಳಾ ಮಂಡಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಏಳಿಂಜೆ ಲಕ್ಷೀಜನಾರ್ಧನ ಮಹಾಗಣಪತಿ ದೇವಳದ ಮೊಕ್ತೇಸರ ಪ್ರಭಾಕರ ಶೆಟ್ಟಿ ಕೋಂಜಾಲಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜವನ್ನು ಸನ್ಮಾರ್ಗದತ್ತ ಕೊಂಡ್ಯುವ ಸಾಮರ್ಥ್ಯ ಸ್ರೀಯರಿಗಿದೆ ಎಂದರು.
ಏಳಿಂಜೆ ಲಕ್ಷೀಜನಾರ್ಧನ ಮಹಾಗಣಪತಿ ದೇವಳದ ಅರ್ಚಕ ಗಣೇಶ್ ಭಟ್ ಆಶೀರ್ವಚನ ನೀಡಿದರು.
ಈ ಸಂದರ್ಭ ಸಮಾಜ ಸೇವಕಿ ಶಾಂಭವಿ ಶೆಟ್ಟಿ, ಏಳಿಂಜೆ ಶಾಂಭವಿ ನದಿಗೆ ಕಾರು ಬಿದ್ದ ಸಂದರ್ಭ ಕಾರಿನಲ್ಲಿದವರನ್ನು ಬದುಕಿಸಿದ ಸ್ಥಳೀಯ ನಿವಾಸಿಗಳಾದ ಗಿರೀಶ್, ಮಾರ್ಕ್ ವಾಸ್, ಸೋಮನಾಥ್, ದಿವಾಕರ ಚೌಟ, ನಿತಿನ್ ಮಡ್ಮಣ್, ಗುಣಪಾಲ್, ಅಶೋಕ್, ತಾರಾನಾಥ್ ಅವರನ್ನು ಸನ್ಮಾನಿಸಲಾಯಿತು. ಕೃತಿಕಾ, ರೂಪೇಶ್, ಶ್ರಾವ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಲ್ಲಮುಂಡ್ಕೂರು ಪ್ರಾರ್ಥಮಿಕ ಕೇಂದ್ರದ ವೈದ್ಯಾಧಿಕಾರಿ ತ್ರಿವೇಣಿ, ವೈ ಯೋಗೀಶ್ ರಾವ್, ದಿವಾಕರ ಶೆಟ್ಟಿ ಕೋಂಜಾಲಗುತ್ತು, ಸಂಜೀವ ಶೆಟ್ಟಿ ನಂದನಮನೆ, ಶ್ಯಾಮಲಾ ಪ್ರಭಾಕರ ಶೆಟ್ಟಿ, ಏಳಿಂಜೆ ಜಾರಂತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸದಾನಂದ ಶೆಟ್ಟಿ, ನವಚೇತನ ಯುವಕ ಮಂಡಲದ ಗೌರವಾಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ, ದಯಾನಂದ ಶೆಟ್ಟಿ ಕೋಂಜಾಲಗುತ್ತು, ಕೃಷ್ಣ ಸಾಲ್ಯಾನ್, ನೇತ್ರಾವತಿ ಸಂಜೀವ ಶೆಟ್ಟಿ, ವತ್ಸಲಾ ಯೋಗೀಶ್ ರಾವ್, ಯುವತಿ ಮತ್ತು ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ನಾಗಲಕ್ಷೀ ಗಣೇಶ್ ಭಟ್ ವರಧಿ ವಾಚಿಸಿದರು, ನಿಶಿತಾ ಸನ್ಮಾನ ಪತ್ರ ವಾಚಿಸಿದರು, ಕೌಶಲ್ಯ ಶೆಟ್ಟಿ ಕೋಂಜಾಲಗುತ್ತು ಸನ್ಮಾನಿತರನ್ನು ಪರಿಚಯಿಸಿದರು, ಸೆವಿರಿನ್ ಲೋಬೋ ಮತ್ತು ರಮಾವತಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ರಘುರಾಮ ಶೆಟ್ಟಿ ಸ್ವಾಗತಿಸಿ ಕಾರ್ಯದರ್ಶಿ ಜಯಂತಿ ಶೆಟ್ಟಿ ವಂದಿಸಿದರು. ಸವಿತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-14021904

Comments

comments

Comments are closed.

Read previous post:
Kinnigoli-14021903
ಕೆಮ್ರಾಲ್ : ರಸ್ತೆ ಸುರಕ್ಷಾ ಸಪ್ತಾಹ

ಕಿನ್ನಿಗೋಳಿ: ರಸ್ತೆ ಸುರಕ್ಷಾ ಸಪ್ತಾಹದ ಪ್ರಯುಕ್ತ ಪಂಜದಗುತ್ತು ಶಾಂತರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಆಚರಿಸಲಾಯಿತು. ಶಿಕ್ಷಕಿ ಶರ್ಲಿ ಸುಮಾಲಿನಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ...

Close