ಹಳೆಯಂಗಡಿ ವಿನಾಯಕ ಮಠ ಬಿಂಬ ಪ್ರತಿಷ್ಠೆ

ಕಿನ್ನಿಗೋಳಿ: ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠದಲ್ಲಿ ಶ್ರೀ ದುರ್ಗಾಪರಮೇಶ್ವರೀ ಮತ್ತು ಶ್ರೀ ವಿನಾಯಕ ದೇವರುಗಳ ಅಷ್ಟಬಂಧ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕವು ಫೆ..10ರಿಂದ 17ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಗುರುವಾರ ಗುರುಗಣಪತಿ ಪೂಜೆ, ಸ್ವಸ್ತಿಪುಣ್ಯಾಹ ವಾಚನ, ಅಂಕುರ ಪೂಜೆ, ಪ್ರಾಸಾದ ಶಿಖರ ಪ್ರತಿಷ್ಠೆ, ಅಷ್ಟಬಂಧ ಪೂರ್ವಕ ಶ್ರೀ ದುರ್ಗಾಪರಮೇಶ್ವರೀ ಮತ್ತು ಶ್ರಿ ವಿನಾಯಕ ದೇವರ ಬಿಂಬ ಪ್ರತಿಷ್ಠೆ, ಅನ್ನಸಂತರ್ಪಣೆ ಮತ್ತಿತರ ಪೂಜಾ ಕೈಂಕರ್ಯಗಳು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂಧರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ, ಸೂರ್ಯಕುಮಾರ್, ಗೌರವಾಧ್ಯಕ್ಷ ಬಿ. ಚಂದ್ರಕುಮಾರ್, ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠದ ಮೊಕ್ತೇಸರರಾದ ದಿವಾಕರ ಆಚಾರ್ಯ, ಕೋಶಾಧಿಕಾರಿ ಗಜೇಂದ್ರ ಕುಮಾರ್, ಕಾರ್ಯದರ್ಶಿ ತುಕರಾಮ್ ಆಚಾರ್ಯ, ಗುರುಸೇವಾ ಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಮಧು ಆಚಾರ‍್ಯ, ಉದ್ಯಮಿಗಳಾದ ಮಹೇಶ್ ಆಚಾರ್ಯ, ಪೃಥ್ವೀರಾಜ ಆಚಾರ‍್ಯ ಮತ್ತಿತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

Kinnigoli-14021901

Comments

comments

Comments are closed.

Read previous post:
ಬಿಜೆಪಿ ಯುವ ಮೋರ್ಚಾ ವತಿಯಿಂದ ಕಮಲ್ ಕಪ್

ಕಿನ್ನಿಗೋಳಿ: ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೇತ್ರತ್ವದಲ್ಲಿ ಮೂಲ್ಕಿ-ಮೂಡುಬಿದ್ರಿ ಬಿಜೆಪಿ ಯುವ ಮೋರ್ಚಾದ ಆಶ್ರಯದಲ್ಲಿ ಫೆಬ್ರವರಿ 17 ರಂದು ಸಂಜೆ 3 ಗಂಟೆಗೆ ಕಟೀಲು ದೇವಳ ಶಾಲಾ ಮ್ಯೆದಾನದಲ್ಲಿ...

Close