ಭಗವಂತನ ಆರಾಧನೆಯಿಂದ ಲೋಕ ಕಲ್ಯಾಣ

ಕಿನ್ನಿಗೋಳಿ: ನಿರಂತರ ಶ್ರದ್ದಾ ಭಕ್ತಿ ಹಾಗೂ ಭಗವಂತನ ಆರಾಧನೆಯಿಂದ ಲೋಕ ಕಲ್ಯಾಣ ಸಾದ್ಯ ಎಂದು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು.
ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರೀ ಮತ್ತು ಶ್ರೀ ವಿನಾಯಕ ದೇವರುಗಳ ಅಷ್ಟಬಂಧ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕ ಪೂರ್ವಭಾವಿಯಾಗಿ ಗುರುವಾರ ಬೆಳಿಗ್ಗೆ ವಿವಿಧ ದಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಬ್ರಹ್ಮಶ್ರೀ ನಗ್ರಿ ಕೇಶವ ತಂತ್ರಿ ಮೂಡಬಿದಿರೆ ಶುಭಾಶಂಸನೆಗೈದರು. ಆಗಮ ವಿದ್ವಾಂಸ ವಿದ್ವಾನ್ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.
ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಳದ ಆಡಳಿತ ಮೊಕ್ತೇಸರ ಕೇಶವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಬಾರಕೂರು ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ವಿ, ಶ್ರೀಧರ ಆಚಾರ್ಯ, ಮೂಡಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಜಯಕರ ಪುರೋಹಿತ್, ಕಾರ್ಕಳ ನೆಕ್ಲಾಜೆ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ರತ್ನಾಕರ ಆಚಾರ್ಯ, ಕಟಪಾಡಿ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಳದ ಆಡಳಿತ ಮೊಕ್ತೇಸರ ನವೀನ ಆಚಾರ್ಯ, ಕೊಲಕಾಡಿ ಕಾಳಿಕಾಂಬ ದೇವಳದ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ, ಕಾಪು ಕಾಳಿಕಾಂಬಾ ದೇವಳದ ಶೇಖರ ಆಚಾರ್ಯ, ಕೋಟೆಕಾರು ಕಾಳಿಕಾಂಬಾ ದೇವಳದ ಅಧ್ಯಕ್ಷ ಸುಂದರ ಆಚಾರ್ಯ ಕೋಟೆಕಾರು, ಕುಂಬಳೆ ಕಾಳಿಕಾಂಬ ದೇವಳದ ಅಧ್ಯಕ್ಷ ಸುಧಾಕರ ಆಚಾರ್ಯ ಆರಿಕ್ಕಾಡಿ, ಬಂಗ್ರಮಂಜೇಶ್ವರ ಕಾಳಿಕಾ ಪರಮೇಶ್ವರೀ ದೇವಳದ ಅಧ್ಯಕ್ಷ ಉಮೇಶ್ ಆಚಾರ್ಯ, ಮಧೂರು ಶ್ರೀ ಕಾಳಿಕಾಂಬ ಮಠದ ಅಧ್ಯಕ್ಷ ಪರಮೇಶ್ವರ ಆಚಾರ್ಯ, ಮುಂಬೈ ಉದ್ಯಮಿ ಪಡುಬಿದ್ರೆ ಸದಾಶಿವ ಆಚಾರ್ಯ, ಅವಿಭಜಿತ ದ.ಕ.ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಶ್ರೀಮದ್ ಆನೆಗುಂದಿ ಸಂಸ್ಥಾನ ಸರಸ್ವತೀ ಪೀಠದ ಪ್ರಧಾನ ಕಾರ್ಯದರ್ಶಿ ಎಂ.ಬಿ. ಲೋಕೇಶ್ ಆಚಾರ್ಯ ಪಡುಕುತ್ಯಾರ್, ನಾಲ್ಕೂರು ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ಬಿ. ಜಗದೀಶ್ ಆಚಾರ್ಯ ಪಡುಪಣಂಬೂರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ. ಸೂರ್ಯಕುಮಾರ್, ಗೌರವಾಧ್ಯಕ್ಷ ಬಿ.ಚಂದ್ರಕುಮಾರ್, ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠದ ಮೊಕ್ತೇಸರ ದಿವಾಕರ ಆಚಾರ್ಯ, ಕೋಶಾಧಿಕಾರಿ ಬಿ.ಗಜೇಂದ್ರ ಕುಮಾರ್, ಕಾರ್ಯದರ್ಶಿ ತುಕರಾಮ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಶೈಲಜಾ ಕಾರ್ಯಕ್ರಮ ನಿರೂಪಿಸಿದರು.

Kinnigoli15021901

Comments

comments

Comments are closed.

Read previous post:
Kinnigoli-14021905
ಕಟೀಲು : ತಾರಾನಾಥ ಶೆಟ್ಟಿ ಆತ್ಮಹತ್ಯೆ

ಕಿನ್ನಿಗೋಳಿ: ಕಟೀಲು ಸಮೀಪದ ಮಲ್ಲಿಗೆಅಂಗಡಿಯಲ್ಲಿ ವಾಸವಿದ್ದ ತಾರಾನಾಥ ಶೆಟ್ಟಿ(42ವರ್ಷ) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ಕಾರು ಚಾಲಕರಾಗಿದ್ದ ತಾರಾನಾಥ ನಾಟಕ ಕಲಾವಿದರಾಗಿದ್ದರು. ಪತ್ನಿ, ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು...

Close