ಕಿನ್ನಿಗೋಳಿ ಬೇಟಿ ಬಚಾವೊ ಬೇಟಿ ಪಡಾವೋ

ಕಿನ್ನಿಗೋಳಿ: ಹೆಣ್ಣು ಮಕ್ಕಳಿಗೆ ಎಳವೆಯಲ್ಲಿಯೆ ಸಂಸ್ಕಾರ ಶಿಕ್ಷಣ ನೀಡಬೇಕು, ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ ಎಂದು ದ.ಕ.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ದ.ಕ.ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಆಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಸದಸ್ಯರು ಮತ್ತು ಸ್ತ್ರೀ ಶಕ್ತಿ ಸದಸ್ಯೆಯರಿಗೆ ಗುರುವಾರ ಯುಗಪುರುಷ ಸಭಾಭವನದಲ್ಲಿ ನಡೆದ ಬೇಟಿ ಬಚಾವೊ ಬೇಟಿ ಪಡಾವೋ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕಾಶ್ ಬಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್ ಗುಜರನ್, ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆಯ ಶ್ಯಾಮಲಾ ಜಿ, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಬಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ನಾಗರತ್ನ ಸ್ವಾಗತಿಸಿದರು ಆಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Kinnigoli15021902

Comments

comments

Comments are closed.

Read previous post:
Kinnigoli15021901
ಭಗವಂತನ ಆರಾಧನೆಯಿಂದ ಲೋಕ ಕಲ್ಯಾಣ

ಕಿನ್ನಿಗೋಳಿ: ನಿರಂತರ ಶ್ರದ್ದಾ ಭಕ್ತಿ ಹಾಗೂ ಭಗವಂತನ ಆರಾಧನೆಯಿಂದ ಲೋಕ ಕಲ್ಯಾಣ ಸಾದ್ಯ ಎಂದು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು. ಹಳೆಯಂಗಡಿ ಶ್ರೀ...

Close