ಹಳೆಯಂಗಡಿ: ಮತದಾನದ ಕುರಿತು ಜಾಥಾ

ಕಿನ್ನಿಗೋಳಿ: ಶಿಕ್ಷಣ ಇಲಾಖೆ ಮತ್ತು ಚುನಾವಣಾ ಆಯೋಗದ ಆದೇಶದ ಮೇರೆಗೆ, ಎನ್ ಎಸ್ ಎಸ್ ರೋವರ್ಸ್ ಮತ್ತು ಮತದಾನ ಜಾಗೃತಿ ಕೋಶ ಇದರ ಜಂಟಿ ಸಹಯೋಗದಲ್ಲಿ ಕಡ್ಡಾಯ ಮತದಾನ ಮಾಡುವ ಉದ್ದೇಶದ ಕುರಿತು ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಹಳೆಯಂಗಡಿ ಮತ್ತು ಇಂದಿರಾನಗರ ಪರಿಸರದಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕಾಲೇಜು ಪ್ರಿನ್ಸಿಪಾಲ್ ಡಾ. ಪಿ.ಬಿ. ಪ್ರಸನ್ನ ಚಾಲನೆ ನೀಡಿದರು.
ಎನ್.ಎಸ್.ಎಸ್. ಅಧಿಕಾರಿ ಅವಿನಾಶ್, ರೇಂಜರ್ಸ್ ಅಧಿಕಾರಿ ಅಕ್ಷತಾ ಸುವರ್ಣ, ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಮುಲ್ಕಿ, ಮೂಡಬಿದ್ರೆ ಕ್ಷೇತ್ರದ ಮತದಾನ ಜಾಗೃತಿ ಕೋಶ ಇದರ ಸಂಚಾಲಕ ಶ್ರೀಧರ್.ಕೆ. ಡಾ. ಸಂತೋಷ್ ಪಿಂಟೊ, ಶಿಕ್ಷಕರಾದ ಮಾಲತಿ. ಕೆ., ರೋಶನಿ, ಅಬ್ದುಲ್ ರಜಾಕ್, ರಾಹುಲ್ ಕುಮಾರ್, ಅಶ್ವಿನಿ, ಚಂದ್ರಾವತಿ, ಹಾಗು ಮಂಜುಳಾ ಮಲ್ಯ ಉಪಸ್ಥಿತರಿದ್ದರು. ಸುಮಾರು ಮುನ್ನೂರಕ್ಕು ಹೆಚ್ಚಿನ ವಿಧ್ಯಾರ್ಥಿಗಳು ಕಡ್ಡಾಯ ಮತದಾನದ ಕುರಿತು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.

Kinnigoli-15021902

Comments

comments

Comments are closed.

Read previous post:
Kinnigoli-15021901
ಕಿನ್ನಿಗೋಳಿ ಅಂಗವಿಕಲರಿಗೆ ಚೆಕ್ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯತ್ ನ ನಿಧಿ - 1 ರ ಅಂಗವಿಕಲರ ಕ್ರಿಯಾಯೋಜನೆ ಹಾಗೂ 14ನೇ ಹಣಕಾಸು ಅನುದಾನಲ್ಲಿ ಅಂಗವಿಕಲರಿಗೆ ಕೊಡಮಾಡುವ ಚೆಕ್ ಅನ್ನು ಕಿನ್ನಿಗೋಳಿ...

Close