ಅಂಗರಗುಡ್ಡೆ – ಜನಾರ್ದನನಡಿಗೆ ನಮ್ಮ ನಡಿಗೆ

ಕಿನ್ನಿಗೋಳಿ: ಜನರಲ್ಲಿ ಸಂಘಟನೆ, ಧಾರ್ಮಿಕತೆ , ಶ್ರದ್ಧೆ ಹಾಗೂ ಧರ್ಮಜಾಗೃತಿಗೆ ಪೂರಕವಾಗುವ ಕೆಲಸಗಳು ನಡೆಯಬೇಕು ಎಂದು ಕಟೀಲು ಪದವಿ ಕಾಲೇಜು ಉಪನ್ಯಾಸಕ ಡಾ. ಸೋಂದಾ ಭಾಸ್ಕರ್ ಭಟ್ ಹೇಳಿದರು.
ಕೆಂಚನಕೆರೆ-ಅಂಗರಗುಡ್ಡೆ ಬಸ್ಸು ತಂಗುದಾಣದ ಬಳಿ ಭಗತ್ ಸಿಂಗ್ ಯುವಕ ವೃಂದ ಅಂಗರಗುಡ್ಡೆ ಕೆಂಚನಕೆರೆ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಅಂಗರಗುಡ್ಡೆ ಬಸ್ಸು ನಿಲ್ದಾಣದಿಂದ ಜನಾರ್ದನನಡಿಗೆ ನಮ್ಮ ನಡಿಗೆ ಅಂಗರಗುಡ್ಡೆಯಲ್ಲಿ ಸಾಮೂಹಿಕ ಪಾರ್ಥನೆ ನಡೆಸಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಸಂಘಟನೆಯ ಯೋಗೀಶ್ ಆಚಾರ್ಯ, ಉಮೇಶ್ ಆಚಾರ್ಯ, ಶ್ರೀಕಾಂತ್ ಶೆಟ್ಟಿ , ದಿವಾಕರ ಶೆಟ್ಟಿ ಕುಬೆವೂರು, ಚಂದ್ರಶೇಖರ್ ಕುಬೆವೂರು, ಜಯಕುಮಾರ್ ಕುಬೆವೂರು, ಮಾದವ ಕುಬೆವೂರು ಮತ್ತಿತರರಿದ್ದರು. ಅಂಗರಗುಡ್ಡೆ – ಕೆಂಚನಕೆರೆ, ಶಿಮಂತೂರು ಗ್ರಾಮದ 1000 ಕ್ಕೂ ಮಿಕ್ಕಿ ಜನರು ಭಾಗವಹಿಸಿ ಭಜನಾಸಂಕೀರ್ತನೆಯೊಂದಿಗೆ ಶಿಮಂತೂರು ಅದಿಜನಾರ್ದನ ದೇವಳಕ್ಕೆ ಪಾದಯಾತ್ರೆ ನಡೆಯಿತು.
Kinnigoli18021902

Comments

comments

Comments are closed.

Read previous post:
Kinnigoli16021901
ಪಟ್ಟೆ – ಯತಿರಾಜ್ ಪೂಜಾರಿ ಆಯ್ಕೆ

ಕಿನ್ನಿಗೋಳಿ :  ಶ್ರೀ ಅಂಬಿಕಾ ಅನ್ನಪೂರ್ಣೆಶ್ವರೀ ಯಕ್ಷಗಾನ ಸೇವಾ ಸಮಿತಿ ಪಟ್ಟೆ ಇದರ 25ನೇ ವರ್ಷದ ಅಧ್ಯಕ್ಷರಾಗಿ ಯತಿರಾಜ್ ಪೂಜಾರಿ ಪಟ್ಟೆ ಮಡಿಲೊಟ್ಟು, ಕಾರ್ಯದರ್ಶಿಯಾಗಿ ಬಾಲಕೃಷ್ಣ ಸಾಲಿಯಾನ್ ಪಟ್ಟೆ...

Close