ನವಚೇತನ ಯುವಕ ಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ: ನಮ್ಮನ್ನು ನಾವು ಅರ್ಥಮಾಡಿಕೊಂಡಲ್ಲಿ ಜಗತ್ತನ್ನೇ ಅರ್ಥಮಾಡಿಕೊಳ್ಳಬಹುದು. ಯುವಜನತೆ ಯಾವುದೇ ಅಮಿಷಗಳಿಗೆ ಬಲಿಯಾಗದೆ ದೇಶದ ಸಂಪತ್ತಾಗಬೇಕು ಎಂದು ಫಲಿಮಾರು ಸ. ಪ. ಪೂರ್ವ ಕಾಲೇಜು ಪ್ರಿನ್ಸಿಪಾಲ್ ಗ್ರೆಟ್ಟಾ ಮೊರಾಸ್ ಹೇಳಿದರು.
ಏಳಿಂಜೆ ನವಚೇತನ ಯುವಕ ಮಂಡಲದ 32 ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ನವಪದವೀಧರರ ಸಮ್ಮಿಲನ 2017-18 ಕಾರ್ಯಕ್ರಮದಲ್ಲಿ ಮಾತನಾಡಿದರು.
ಏಳಿಂಜೆ ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ ಮಾತನಾಡಿ ಸಂಘಸಂಸ್ಥೆಗಳು ಗ್ರಾಮದಲ್ಲಿ ಸೇವಾ ಕಾರ್ಯ ಹಾಗೂ ಜನಪರ ಕಾಳಜಿಯ ಮೂಲಕವಾಗಿ ಗುರುತಿಸಿಕೊಂಡು ಅಭಿವೃದ್ಧಿಯಲ್ಲಿ ತೊಗಡಿಸಿಕೊಂಡು ಸಾಧನೆ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದರು.
ಕೋಂಜಾಲುಗುತ್ತು ದಿವಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಜೀವ ರಕ್ಷಕರಾದ ಗುಣಪಾಲ ಕುಲಾಲ್ ಏಳಿಂಜೆ, ಅಶೋಕ ಕುಲಾಲ್ ಏಳಿಂಜೆ , ವಿಶ್ವತ್ ಶೆಟ್ಟಿ, ಸೋಮನಾಥ್, ಜೋನ್ ವಾಸ್ ಅವರನ್ನು ಸನ್ಮಾನಿಸಲಾಯಿತು. ಕಳೆದ ಬಾರಿ ಪದವಿ ಮುಗಿಸಿದವರನ್ನು ಗೌರವಿಸಲಾಯಿತು.
ಕೆರ್ಸಡೇರ್ ಬಿರ್ಸೆರ್ ಕಾರ್ಯಕ್ರಮದ ವಿಜೇತರಿಗೆ ಕರುಣಾಕರ ಶೆಟ್ಟಿ ಕೋಂಜಾಲುಗುತ್ತು ಬಹುಮಾನ ವಿತರಿಸಿದರು.
ಅನಿಲ್ ಶೆಟ್ಟಿ ಕೋಂಜಾಲಗುತ್ತು ಸನ್ಮಾನಿತರನ್ನು ಪರಿಚಯಿಸಿದರು, ಹರೀಶ್ ಶೆಟ್ಟಿ ತಾಮಣಿಗುತ್ತು ವಿಜೇತರ ಪಟ್ಟಿ ವಾಚಿಸಿದರು. ಲಕ್ಷಣ್ ಬಿ.ಬಿ ಏಳಿಂಜೆ ವರದಿ ವಾಚಿಸಿದರು, ನವಚೇತನ ಯುವಕ ಮಂಡಲದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದೇವಳದ ಅರ್ಚಕ ಗಣೇಶ್ ಭಟ್ ಏಳಿಂಜೆ, ಕೆ. ಭುವನಾಭಿರಾಮ ಉಡುಪ, ದಯಾನಂದ ಶೆಟ್ಟಿ ಕೋಂಜಾಲು ಗುತ್ತು, ಸುಧಾಕರ ಶೆಟ್ಟಿ ಕೋಂಜಾಲಗುತ್ತು, ಸಂಜೀವ ಶೆಟ್ಟಿ ನಂದನಮನೆ, ಪ್ರಭಾಕರ ಆಚಾರ್ಯ, ಕೃಷ್ಣ ಮೂಲ್ಯ, ಸುಧಾಕರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ದೇವಿಪ್ರಸಾದ್ ಸ್ವಾಗತಿಸಿ, ಶರತ್ ಶೆಟ್ಟಿ ಕಿನ್ನಿಗೋಳಿ ಮತ್ತು ಕಾರ್ಯಕ್ರಮ ನಿರೂಪಿಸಿದರು.

Kinnigoli18021901

Comments

comments

Comments are closed.

Read previous post:
Kinnigoli16021901
ಪಟ್ಟೆ – ಯತಿರಾಜ್ ಪೂಜಾರಿ ಆಯ್ಕೆ

ಕಿನ್ನಿಗೋಳಿ :  ಶ್ರೀ ಅಂಬಿಕಾ ಅನ್ನಪೂರ್ಣೆಶ್ವರೀ ಯಕ್ಷಗಾನ ಸೇವಾ ಸಮಿತಿ ಪಟ್ಟೆ ಇದರ 25ನೇ ವರ್ಷದ ಅಧ್ಯಕ್ಷರಾಗಿ ಯತಿರಾಜ್ ಪೂಜಾರಿ ಪಟ್ಟೆ ಮಡಿಲೊಟ್ಟು, ಕಾರ್ಯದರ್ಶಿಯಾಗಿ ಬಾಲಕೃಷ್ಣ ಸಾಲಿಯಾನ್ ಪಟ್ಟೆ...

Close