ಹಳೆಯಂಗಡಿ: ವಿನಾಯಕ ಮಠದಲ್ಲಿ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ: ದೇವರ ಭಯ ಭಕ್ತಿ ಧರ್ಮ ಸಂಸ್ಕಾರದ ಆಚರಣೆಗಳು ಮನುಷ್ಯನನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠದಲ್ಲಿ ಬ್ರಹ್ಮಕಲಶೋತ್ಸವ ಸಂದರ್ಭ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಧಾರ್ಮಿಕ ಕ್ಷೇತ್ರಗಳಲ್ಲಿ ದೇಶ ಭಕ್ತಿ ಹೆಚ್ಚಿಸಲಿ. ಭಕ್ತಿಯನ್ನು ಹೆಚ್ಚಿಸಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಉಡುಪಿ ಅಧೋಕ್ಷಜ ಮಠದ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಟಪಾಡಿ ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ
ಮಾತನಾಡಿ ಧಾರ್ಮಿಕ ನಂಬಿಕೆಗಳು ಬಲಗೊಂಡಾಗ ಕ್ಷೇತ್ರಗಳು ಅಭಿವೃದ್ಧಿಯಾಗುತ್ತದೆ. ಎಂದರು.
ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಕೆ.ಅಮರನಾಥ ಶೆಟ್ಟಿ, ಸಮಾಜ ಸೇವಕ ಪಂಜದ ಗುತ್ತು ಶಾಂತರಾಮ ಶೆಟ್ಟಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಧರ್ಮದರ್ಶಿ ಯಾಜಿ ಡಾ.ನಿರಂಜನ್ ಭಟ್, ಹೊಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಳದ ಮೊಕ್ತೇಸರ ರಂಗನಾಥ ಭಟ್, ಹಳೆಯಂಗಡಿ ಶ್ರೀ ವಿಠೋಭ ಭಜನಾಮಂಡಳಿಯ ಅಧ್ಯಕ್ಷ ಡಾ.ಎಚ್.ಶಿವಾನಂದ ಪ್ರಭು, ಸಸಿಹಿತ್ಲು ಶ್ರೀ ಭಗವತೀ ದೇವಳದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಳದ ಮೊಕ್ತೇಸರ ಬಿ.ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್, ಹಳೆಯಂಗಡಿ ದೇವಾಡಿಗರ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪಾವಂಜೆ, ಬಾರ್ಕೂರು ಕಚ್ಚೂರು ನಾಗೇಶ್ವರ ದೇವಳದ ಉಪಾಧ್ಯಕ್ಷ ಗಣೇಶ್ ಯು. ಹಳೆಯಂಗಡಿ, ಸಸಿಹಿತ್ಲು ಲಚ್ಚಿಲ್ ಮೊಗವೀರ ಸಭಾದ ಮಾಜಿ ಅಧ್ಯಕ್ಷ ರಾಮ ಟಿ. ಕಾಂಚನ್, ಮೂಡಬಿದಿರೆ ಅಲಂಗಾರು ಜಗದ್ಗುರು ಶ್ರೀ ಅಯ್ಯ ನಾಗಲಿಂಗ ಸ್ವಾಮೀ ಮಠದ ಅಧ್ಯಕ್ಷ ಧನಂಜಯ ಪಾಲ್ಕೆ, ಗೋಕರ್ಣ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಧುಕರ ಚಂದ್ರಶೇಖರ ಆಚಾರ್ಯ, ಗುರುಸೇವಾ ಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ವೇ.ಮೂ. ರುದ್ರಯ್ಯ ಪುರೋಹಿತ್, ಸಮಿತಿಯ ಗೌರವಾಧ್ಯಕ್ಷ ಬಿ.ಚಂದ್ರಕುಮಾರ್, ಅಧ್ಯಕ್ಷ ಬಿ.ಸೂರ್ಯಕುಮಾರ್, ಕೋಶಾಧಿಕಾರಿ ಬಿ.ಗಜೇಂದ್ರಕುಮಾರ್, ಕಾರ್ಯದರ್ಶಿ ಎಚ್.ತುಕಾರಾಮ ಆಚಾರ್ಯ, ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಬಿ.ಉಮೇಶ್ ಆಚಾರ್ಯ, ಬಿ.ದಾಮೋದರ ಆಚಾರ್ಯ, ಬಿ.ಭವಾನಿಶಂಕರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಮಠದ ಮೊಕ್ತೇಸರ ಬಿ.ದಿವಾಕರ ಆಚಾರ್ಯ ಸ್ವಾಗತಿಸಿದರು, ಪಡುಕುತ್ಯಾರ್ ಶ್ರೀಮದ್ ಆನೆಗುಂದಿ ಸಂಸ್ಥಾನ ಪೀಠದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಲೋಕೇಶ್ ಆಚಾರ್ಯ ಪ್ರಸ್ತಾವನೆಗೈದರು, ನಿಟ್ಟೆ ಸುರೇಶ್ ಆಚಾರ್ಯ ವಂದಿಸಿದರು, ಜಗದೀಶ್ ಆಚಾರ್ಯ ಪಡುಪಣಂಬೂರು ಹಾಗೂ ಶೈಲಜಾ ದಿವಾಕರ ಆಚಾರ್ಯ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

Kinnigoli18021906

Comments

comments

Comments are closed.

Read previous post:
Kinnigoli18021905
ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆ ಹೆಚ್ಚಾಗಿದೆ

ಕಿನ್ನಿಗೋಳಿ: ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿದೆ. ಕಬಡ್ಡಿ ಎಲ್ಲಾ ರೀತಿಯಲ್ಲಿ ಸ್ಪೂರ್ತಿ ನೀಡುವ ಕ್ರೀಡೆಯಾಗಿದೆ. ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಸಸಿಹಿತ್ಲು ಎ...

Close