ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆ ಹೆಚ್ಚಾಗಿದೆ

ಕಿನ್ನಿಗೋಳಿ: ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿದೆ. ಕಬಡ್ಡಿ ಎಲ್ಲಾ ರೀತಿಯಲ್ಲಿ ಸ್ಪೂರ್ತಿ ನೀಡುವ ಕ್ರೀಡೆಯಾಗಿದೆ. ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಸಸಿಹಿತ್ಲು ಎ ಇಲೆವನ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಜಿಲ್ಲಾ ಅಮೆಚೂರ್ ಕಬಟ್ಟಿ ಅಸೋಸಿಯೇಷನ್ ಮತ್ತು ಮಂಗಳೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಬಾಗಿತ್ವದಲ್ಲಿ ಸಸಿಹಿತ್ಲು ಶ್ರೀ ಭಗವತಿ ದೇವಳದಬಳಿ ನಡೆದ ಜಿಲ್ಲಾ ಮಟ್ಟದ ನೊಂದಾಯಿತ ತಂಡಗಳ ಹೊನಲು ಬೆಳಕಿನ ಪುರುಷರ ಪ್ರೊ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ್ ನಾನಿಲ್ ಅವರನ್ನು ಸನ್ಮಾನಿಸಲಾಯಿತು.
ಸಸಿಹಿತ್ಲು ಶ್ರೀ ಭಗವತಿ ದೇವಳದ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ದ.ಕ. ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಕೆಪಿಸಿಸಿ ಸದಸ್ಯ ಎಚ್. ವಸಂತ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಮಜಯ ಮಟ್ಟು, ಬೆಂಗಳೂರು ಇಸ್ರೋದ ಡಾ. ಕಾರ್ತಿಕೇಯನ್, ಉದ್ಯಮಿ ಕೆ.ಎಸ್. ಅಶೋಕ್‌ಕುಮಾರ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ ಪಾಣಾರ್, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಚಂದ್ರಕುಮಾರ್, ಅನಿಲ್ ಪೂಜಾರಿ ಸಸಿಹಿತ್ಲು ಬ್ರಹ್ಮ ನಾರಾಯಣಗುರು ಸೇವಾ ಸಮಘದ ಮಾಜಿ ಅರ್ಧಯಕ್ಷ ಧನರಾಜ್ ಕೋಟ್ಯಾನ್, ಎನ್‌ಟಿಕೆಯ ಡಾ. ಶ್ರೀಕಾಂತ್ ರಾವ್, ಮನಪಾ ಸದಸ್ಯ ಪುರುಷೋತ್ತಮ ಚಿತ್ರಾಪುರ, ಮುಕ್ಕಶ್ರೀನಿವಾಸ ಆಸ್ಪತ್ತೆಯ ಡಾ. ಅರೀಫ್, ರಾಮಪ್ಪ ಎಚ್.ಕೋರವಾಲ್, ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಕಾರ್ಯಧ್ಯಕ್ಷ ರತನ್‌ಕುಮಾರ್, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಸಸಿಹಿತ್ಲು ಎ ಇಲೆವನ್ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli18021905

Comments

comments

Comments are closed.

Read previous post:
Kinnigoli16021901
ಪಟ್ಟೆ – ಯತಿರಾಜ್ ಪೂಜಾರಿ ಆಯ್ಕೆ

ಕಿನ್ನಿಗೋಳಿ :  ಶ್ರೀ ಅಂಬಿಕಾ ಅನ್ನಪೂರ್ಣೆಶ್ವರೀ ಯಕ್ಷಗಾನ ಸೇವಾ ಸಮಿತಿ ಪಟ್ಟೆ ಇದರ 25ನೇ ವರ್ಷದ ಅಧ್ಯಕ್ಷರಾಗಿ ಯತಿರಾಜ್ ಪೂಜಾರಿ ಪಟ್ಟೆ ಮಡಿಲೊಟ್ಟು, ಕಾರ್ಯದರ್ಶಿಯಾಗಿ ಬಾಲಕೃಷ್ಣ ಸಾಲಿಯಾನ್ ಪಟ್ಟೆ...

Close