ಗುತ್ತಕಾಡು ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ದೈಹಿಕ ಹಾಗೂ ಮಾನಸಿಕ ಸ್ಥಿರತೆಗೆ ಆರೋಗ್ಯದ ದೃಷ್ಟಿಯಿಂದ ಕ್ರೀಡೆ ಸಹಕಾರಿಯಾಗಿದೆ ಎಂದು ಯುಗಪುರುಷದ ಭುವನಾಭಿರಾಮ ಉಡುಪ ಹೇಳಿದರು. ಅವರು ಗುತ್ತಕಾಡು ಸರಕಾರಿ ಶಾಲೆಯ ಮೈದಾನದಲ್ಲಿ ಗುತ್ತಕಾಡು ಸಂಗಮ್ ಫ್ರೆಂಡ್ಸ್ ಕ್ರಿಕೆಟರ‍್ಸ್ ಇದರ ೩ನೇ ವರ್ಷದ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಮಟ್ಟದ ಕೊರಗ ಸಮುದಾಯದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಕೊರಗ ಸಮುದಾಯದ ನ್ಯಾಯವಾದಿಗಳಾದ ಪ್ರವೀಣ್ ವಾಮಂಜೂರು ಹಾಗೂ ಕುಮಾರಿ ರತ್ನಾ ಕೆ. ಅವರನ್ನು ಗೌರವಿಸಲಾಯಿತು. ಎ.ಪಿ.ಎಂ.ಸಿ. ಸದಸ್ಯ ಪ್ರಮೋದ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಗ್ರಾಮ ಪಂಚಾಯಿತಿ ಸದಸ್ಯ ಟಿ. ಎಚ್ ಮಯ್ಯದ್ದಿ, ಬಿಜೆಪಿ Pತ್ರ ಅಧ್ಯಕ್ಷ ಈಶ್ವರ್ ಕಟೀಲ್, ಬಿಲ್ಲವ ಸಂಘದ ಅಧ್ಯಕ್ಷ ಕುಶಲ ಪೂಜಾರಿ, ಉಭಯ ರಾಜ್ಯ ಕೊರಗ ಸಮುದಾಯದ ಮಾಜಿ ಅಧ್ಯಕ್ಷ ಬಾಲರಾಜ್ ಕೊಡಿಕಲ್, ಗುತ್ತಕಾಡು ನಾಗರಿಕ ಹಿತ ರಕ್ಷಣಾ ವೇದಕೆಯ ಅಧ್ಯಕ್ಷ ಟಿ. ಎ. ಹನೀಫ್, ಮೂಕಾಂಬಿಕಾ ಸೇವಾ ಸಮಿತಿಯ ಚಂದ್ರಶೇಖರ್, ಸ್ವರ್ಣ ವಿವಿಧ್ದೋದೇಶ ಬ್ಯಾಂಕ್‌ನ ಅಧ್ಯಕ್ಷ ಭವಾನಿ, ಸಂಘದ ಅಧ್ಯಕ್ಷ ಆನಂದ ಗುತ್ತಕಾಡು, ಮತ್ತಿತರರು ಉಪಸ್ಥಿತರಿದ್ದರು.
ಶಶಿಕಾಂತ್ ರಾವ್ ಎಳತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli19021901

Comments

comments

Comments are closed.

Read previous post:
Kinnigoli18021901
ನವಚೇತನ ಯುವಕ ಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ: ನಮ್ಮನ್ನು ನಾವು ಅರ್ಥಮಾಡಿಕೊಂಡಲ್ಲಿ ಜಗತ್ತನ್ನೇ ಅರ್ಥಮಾಡಿಕೊಳ್ಳಬಹುದು. ಯುವಜನತೆ ಯಾವುದೇ ಅಮಿಷಗಳಿಗೆ ಬಲಿಯಾಗದೆ ದೇಶದ ಸಂಪತ್ತಾಗಬೇಕು ಎಂದು ಫಲಿಮಾರು ಸ. ಪ. ಪೂರ್ವ ಕಾಲೇಜು ಪ್ರಿನ್ಸಿಪಾಲ್ ಗ್ರೆಟ್ಟಾ ಮೊರಾಸ್...

Close