ಯುವಕರಿಂದ ದೇಶವನ್ನು ಮುನ್ನಡೆಸಲು ಸಾಧ್ಯ

ಕಿನ್ನಿಗೋಳಿ: ಯುವ ಶಕ್ತಿ ದೇಶದ ಬಲಿಷ್ಟ ಶಕ್ತಿ, ಯುವಕರಿಂದ ದೇಶವನ್ನು ಉತ್ತಮವಾಗಿ ಮುನ್ನಡೆಸಲು ಸಾಧ್ಯ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಟೀಲು ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಯುವ ಮೋರ್ಚ ದಕ್ಷಿಣ ಕನ್ನಡದ ಅಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಶನ್ ಮಂಗಳೂರು, ಮಂಗಳೂರು ನಗರ ತಾಲೂಕು ಅಮೆಚೂರ್ ಕಬ್ಬಡ್ಡಿ ಅಸೋಶಿಯೇಶನ್ ಇದರ ಸಹಬಾಗಿತ್ವದಲ್ಲಿ ವಿಜಯಲಕ್ಷ 2019 ಕಮಲ್ ಕಪ್ ಮ್ಯಾಟ್ ಕಬ್ಬಡಿ ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಕ್ರೀಡೆಯ ಮೂಲಕ ಸಮಾಜ ಕಟ್ಟುವ ಕೆಲಸ ನಡೆಯಬೇಕು, 60 ವರ್ಷದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೇಸ್ ಸರಕಾರ ಜನರಿಗೆ ಯಾವುದೇ ಸರಿಯಾದ ಯೋಜನೆ ಕೊಟ್ಟಿಲ್ಲ, ಮೋದಿಯವರು ಪ್ರಧಾನಿಯಾದ ನಂತರ ಜನರಿಗೆ ನೇರವಾಗಿ ಸವಲತ್ತು ಸಿಗುವ ಯೋಜನೆ ರೂಪಿಸಿದ್ದಾರೆ, ಮೋದಿಯವರು ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಉಜ್ವಲ ಯೋಜನೆ, ಸ್ವ ಯೋಜನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುದ್ರ ಯೋಜನೆ, ಶಿಕ್ಷಣಕ್ಕೆ ಸುಖನ್ಯ ಸಮೃದ್ದಿ ಯೋಜನೆ , ಜನರ ಆರೋಗ್ಯದ ದೃಷ್ಟಿಯಿಂದ ಅಯೂಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮತ್ತಿತರ ಯೋಜನೆಗಳನ್ನು ರೂಪಿಸಿದ್ದು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಿದ್ದಲ್ಲಿ ನಮ್ಮ ದೇಶ ಸುಪರ್ ಪವರ್ ದೇಶ ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಈ ಸಂದರ್ಭ ಜಮ್ಮುವಿನಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಪುಷ್ಪಾರ್ಚನೆಗೈದು ಶ್ರದ್ದಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೊಳ್ಳೂರು, ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಬ್ರಿಜೇಶ್ ಚೌಟ, ಹರೀಶ್ ಮೂಡುಶೆಡ್ಡೆ, ರಮಾನಾಥ್ ಅತ್ತಾರ್, ಸಂದೀಪ್ ಶೆಟ್ಟಿ ಮರವೂರು, ಸುದರ್ಶನ್, ಜಯಂತ್ ಕೋಟ್ಯಾನ್, ಯುಹಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಸಿ.ಎ ಬ್ಯಾಂಕ್ ಅಧ್ಯಕ್ಷ ಸುಬ್ರಮಣ್ಯ, ರಾಜೇಶ್ ದಾಸ್, ಶೈಲೇಶ್ ಮೂಲ್ಕಿ, ಸುನೀಲ್ ಅಳ್ವ, ಗೀರೀಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಶಾಂಭವಿ ಶೆಟ್ಟಿ, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಕಿಶೋರ್ ಪೆರ್ಮುದೆ, ರಂಜಿತ್ ಬಂಟ್ವಾಳ, ಸದಸ್ಯರಾದ ಜನಾರ್ಧನ ಕಿಲೆಂಜೂರು, ತಿಲಕ್ ರಾಜ್ ಶೆಟ್ಟಿ, ಬೇಬಿ, ಸುಂದರ್ ಪೂಜಾರಿ ಕಲ್ಲಮುಂಡ್ಕೂರು, ವಿಠಲ್ ಮೂಲ್ಕಿ, ಸಂತೋಷ್ ಶೆಟ್ಟಿ, ಚಿದಾನಂದ ರೈ ಬಂಟ್ವಾಳ, ನವೀನ್ ಬ್ರಹ್ಮಾವರ, ಸಂದೇಶ್ ಶೆಟ್ಟಿ , ಧನಂಜಯ ಶೆಟ್ಟಿಗಾರ್, ಸೋಂದ ಬಾಸ್ಕರ ಭಟ್, ಯುವ ಮೋರ್ಚದ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಗುರುರಾಜ್ ಮಲ್ಲಿಗೆಯಂಗಡಿ, ಚರಣ್, ರಾಜೇಶ್ ದಾಸ್, ದೇವಿಕಿರಣ್ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಮೂಡಬಿದ್ರೆ ಮಂಡಲಾಧ್ಯಕ್ಷ ಈಶ್ವರ್ ಕಟೀಲ್ ಸ್ವಾಗತಿಸಿದರು ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಒಟ್ಟು ೫೬ ತಂಡಗಳು ಕಬ್ಬಡಿ ಪಂದ್ಯಾಟದಲ್ಲಿ ಭಾಗವಹಿಸಿದವು.

Kinnigoli19021902

Comments

comments

Comments are closed.

Read previous post:
Kinnigoli19021901
ಗುತ್ತಕಾಡು ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ದೈಹಿಕ ಹಾಗೂ ಮಾನಸಿಕ ಸ್ಥಿರತೆಗೆ ಆರೋಗ್ಯದ ದೃಷ್ಟಿಯಿಂದ ಕ್ರೀಡೆ ಸಹಕಾರಿಯಾಗಿದೆ ಎಂದು ಯುಗಪುರುಷದ ಭುವನಾಭಿರಾಮ ಉಡುಪ ಹೇಳಿದರು. ಅವರು ಗುತ್ತಕಾಡು ಸರಕಾರಿ ಶಾಲೆಯ ಮೈದಾನದಲ್ಲಿ ಗುತ್ತಕಾಡು ಸಂಗಮ್...

Close