ಹಳೆಯಂಗಡಿ : ಸ್ತ್ರೀ ಶಕ್ತಿ ತರಬೇತಿ ಕಾರ್ಯಾಗಾರ

ಕಿನ್ನಿಗೋಳಿ : ಅಂಗನವಾಡಿ ಕೇಂದ್ರಗಳು ಮಹಿಳೆಯರ ಸಾಂತ್ವಾನ ಕೇಂದ್ರಗಳಾಗಿದ್ದು ಇಲ್ಲಿ ಶೋಷಿತ ಮಹಿಳೆಯರು ಮುಕ್ತವಾಗಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಯೋಜನಾಧಿಕಾರಿ ಶ್ಯಾಮಲಾ ಟಿ.ಕೆ. ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ಗ್ರಾಮಾಂತರದ ಶಿಶು ಅಭಿವೃದ್ಧಿ ಯೋಜನೆ, ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಸಂಯೋಜನೆಯಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರದ ಇಂದಿರಾಗಾಂಧಿ ಸಮುದಾಯ ಭವನದಲ್ಲಿ ಮಂಗಳವಾರ ಆರಂಭಗೊಂಡ ಸ್ತ್ರೀಶಕ್ತಿ ಗೊಂಚಲು ಗುಂಪುಗಳ ಬಲವರ್ಧನೆಗಾಗಿ ನಡೆದ ಪುನಶ್ಚೇತನ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಹಿಳೆಯರ ಆತ್ಮಸ್ಥೈರ್ಯಕ್ಕೆ ಪೂರಕವಾಗುವ ಚಟುವಟಿಕೆ ಅಂಗನವಾಡಿ ಕೇಂದ್ರದಲ್ಲಿ ನಿರಂತರವಾಗಿ ನಡೆಯುತ್ತಿರಬೇಕು ಎಂದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಪಾಣಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೈಗಾರಿಕಾ ತರಬೇತಿ ಸಂಸ್ಥೆಯ ಶಿಕ್ಷಕಿ ವಿದ್ಯಾ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು ಮನೆ ಬಳಕೆಯ ಫಿನಾಯಿಲ್, ದ್ರಾವಣ ಮುಕ್ತ ಸಾಬೂನು, ವಾಶಿಂಗ್ ಪೌಡರ್, ಕ್ಯಾಂಡಲ್, ಪೇಪರ್ ಬ್ಯಾಗ್, ಕೃತಕ ಸೌಂದರ್ಯ ಸಾಧನಗಳು, ಆಭರಣಗಳ ತಯಾರಿ, ಕೇಶ ವಿನ್ಯಾಸ, ಮೇಕಪ್ ಹಾಗೂ ಗೃಹ ಬಳಕೆಯಾಗುವ ಸಾಧನಗಳ ಮಾರಾಟ, ಮಾರುಕಟ್ಟೆ, ಗುಂಪು ಚರ್ಚೆಗಳು ನಡೆಯಲಿದೆ.
ತಾಲೂಕು ಪಂಚಾಯಿತಿ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್.ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಅಂಗನವಾಡಿ ಕಾರ್ಯಕರ್ತರು, ಸ್ತ್ರೀಶಕ್ತಿ ಸದಸ್ಯರು, ಅಂಗನವಾಡಿ ಕೇಂದ್ರಗಳ ಹಿರಿಯ ಮೇಲ್ವಿಚಾರಕಿಯರಾದ ಶೀಲಾವತಿ, ಅಶ್ವಿನಿ ಎಂ.ಕೆ., ನಾಗರತ್ನಾ ಉಪಸ್ಥಿತರಿದ್ದರು.

Kinnigol-20021902

Comments

comments

Comments are closed.

Read previous post:
Kinnigoli19021903
ತಾಳಿಪಾಡಿ ಶ್ರೀ ವೆಂಕಟರಮಣ ದೇವಳ ಯಕ್ಷಗಾನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಮಠದ ಶ್ರೀ ಲಕ್ಷ್ಮೀ ವೆಂಕಟರಮಣ ದೆವಳದಲ್ಲಿ ನಡೆದ 12ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಜಾತ್ರಾ ಮಹೋತ್ಸವದ ಸಂದರ್ಭ ನಡೆದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ...

Close