ಕಮಲ್ ಕಪ್ ಮ್ಯಾಟ್ ಕಬ್ಬಡಿ ಪ್ರಶಸ್ತಿ ಆಳ್ವಾಸ್‌ಗೆ

ಕಿನ್ನಿಗೋಳಿ : ಸಂಘಟನಾ ಶಕ್ತಿ ಬಲಗೊಳ್ಳಲು ಕ್ರೀಡೆ ಅತ್ಯಗತ್ಯ ಕ್ರೀಡೆಯಿಂದ ಮಾನಸಿಕ ಬೆಳವಣಿಗೆಯೂ ಸಾಧ್ಯ ಎಂದು ಮೂಲ್ಕಿ ಮೂಡಬಿದಿರೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲು ಹೇಳಿದರು ಕಟೀಲು ಕಾಲೇಜು ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಶನ್ ಮಂಗಳೂರು, ಮಂಗಳೂರು ನಗರ ತಾಲೂಕು ಅಮೆಚೂರ್ ಕಬ್ಬಡ್ಡಿ ಅಸೋಶಿಯೇಶನ್ ಇವರ ಸಹಬಾಗಿತ್ವದಲ್ಲಿ ನಡೆದ ವಿಜಯಲಕ್ಷ 2019 ಕಮಲ್ ಕಪ್ ಮ್ಯಾಟ್ ಕಬ್ಬಡಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮುಲ್ಕಿ ಮೂಡಬಿದಿರೆ ಬಿಜೆಪಿ ಮಂಡಲಾಧ್ಯಕ್ಷ ಈಶ್ವರ್ ಕಟೀಲು,ತಾಲೂಕು ಪಂಚಾಯಿತಿ ಸದಸ್ಯೆ ರಶ್ಮೀ ಆಚಾರ್ಯ, ಸೋಂದಾ ಬಾಸ್ಕರ ಭಟ್, ಸುನೀಲ್ ಆಳ್ವ, ಸುಂದರ ಪೂಜಾರಿ ನಿಡ್ಡೋಡಿ, ದೈಹಿಕ ಶಿಕ್ಷಕರಾದ ವಿಜಯಕುಮಾರ್ ಶೆಟ್ಟಿ, ಸಂತೋಷ್, ಶ್ರೀವತ್ಸ, ರಾಜಶೇಖರ್, ವಿಠಲ ಲಿಂಗಪ್ಪಯ್ಯಕಾಡು, ರಾಜೇಶ್ ದಾಸ್ ಪ್ರವೀಣ್ ಕುಮಾರ್ ಕೊಂಡೇಲ, ದುರ್ಗಾಚರಣ್ ಕಟೀಲು, ಸುರೇಶ್ ಶೆಟ್ಟಿ ಎಕ್ಕಾರು, ಪ್ರವೀಣ್ ಶೆಟ್ಟಿ ನಿಡ್ಡೋಡಿ, ಕೇಶವ ಕರ್ಕೇರ, ಉಮಾನಾಥ ಶೆಟ್ಟಿ ಕೊಡೆತ್ತೂರು ಭಾನುಪ್ರಕಾಶ್ ಶೆಟ್ಟಿ ಅರುಣ್ ಕುಮಾರ್ ಉಲ್ಲಂಜೆ, ಹರೀಶ್, ನವೀನ್ ರಾಜ್ ಮೂಲ್ಕಿ, ಉದಯ ಕಟೀಲು, ರಘುವೀರ್ ಕಾಮತ್, ಸುನೀಲ್ ಕುಮಾರ್ ಕಟೀಲು ಸಂದೀಪ್ ಕಟೀಲು, ಪ್ರವೀಣ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಒಟ್ಟು ೫೬ ತಂಡಗಳೂ ಬಾಗವಹಿಸಿದ್ದು ಪ್ರಥಮ ಆಳ್ವಾಸ್ ಕಾಲೇಜು ಮೂಡಬಿದ್ರೆ, ದ್ವಿತೀಯ ವಿಕಾಸ್ ಕಾಲೇಜು ಮಂಗಳೂರು, ತೃತೀಯ ಪರಸ್ಪರ ನಾರಾವಿ ಮತ್ತು ಚತುರ್ಥ ಕೊಲ್ನಾಡು ಪ್ರೆಂಡ್ಸ್ ಮೂಲ್ಕಿ ವಿಜೇತರಾಗಿದ್ದಾರೆ.

Kinnigol-20021904

Comments

comments

Comments are closed.

Read previous post:
Kinnigol-20021903
ಬಳ್ಕುಂಜೆ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಉದ್ಯೋಗ ಖಾತರಿ ಯೋಜನೆಯಲ್ಲಿ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಗಂದಡಿ ರಸ್ತೆಯ ಕಾಂಕ್ರೀಟಿ ರಸ್ತೆಯನ್ನು ಮೂಲ್ಕಿ ಮೂಡಬಿದಿರೆ ಶಾಸಕ...

Close