ಕೆಮ್ರಾಲ್ ಗ್ರಾಮ ಸಭೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ಕೆಮ್ರಾಲ್, ಕೊಯಿಕುಡೆ ಗ್ರಾಮ ಗಳ 2018-19ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಮಂಗಳವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅಂಬೇಡ್ಕರ್ ಸಮುದಾಯ ಭವನ ಮೂರು ವರ್ಷವಾದರೂ ಕಾಮಾಗಾರಿ ಮುಗಿದಿಲ್ಲ ಯಾಕೆ ವಿಳಂಬ. ಇದರ ಬಗ್ಗೆ ವಿಚಾರಿಸಿದಾಗ ಕೇವಲ ಆಶ್ವಾಸನೆ ಗಡುವುಗಳನ್ನು ನೀಡುತ್ತಾರೆ ಯಾಕೆ? ಎಂದು ನಿತಿನ್ ವಾಸ್ ಹಾಗೂ ಗ್ರಾಮಸ್ಥರು ಪಂಚಾಯಿತಿ ಆಡಳಿತಕ್ಕೆ ಪ್ರಶ್ನೆ ಮಾಡಿದಾಗ ಉತ್ತರಿಸಿದ ಆಡಳಿತ ಈ ಯೋಜನೆಯನ್ನು ನಿರ್ಮಿತಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು ತಾಂತ್ರಿಕ ಕಾರಣಗಳಿಂದ ಕೆಲಸ ವಿಳಂಬವಾಗುತ್ತಿದೆ ಎಪ್ರಿಲ್‌ನೊಳಗೆ ಕಾಮಾಗಾರಿ ಮುಗಿಯುವ ಭರವಸೆ ಸಿಕ್ಕಿದೆ ಎಂದು ಉತ್ತರಿಸಿತು.
ಕೆಂಪುಗುಡ್ಡೆ ಪರಿಸರದ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿವೇಶನ ಕಟ್ಟುತ್ತಿದ್ದಾರೆ. ಪಂಚಾಯಿತಿಗೆ ಮನೆ ನಿವೇಶನಕ್ಕಾಗಿ ಮನವಿ ಕೊಟ್ಟವರು ಏನು ಮಾಡಬೇಕು ಬಡವರಿಗೆ ಬೆಲೆ ಇಲ್ಲವಾ ಪಂಚಾಯಿತಿ ಏನು ಕ್ರಮ ಕೈಗೊಂಡಿದೆ ಎಂದು ಗ್ರಾಮಸ್ಥ ಸೀತರಾಮ ಪಂಜ ಕೇಳಿದರು. ಗ್ರಾಮ ಕರಣಿಕ ಸಂತೋಷ್ ಇದಕ್ಕೆ ಉತ್ತರಿಸಿ ಅಕ್ರಮವಾಗಿ ಒತ್ತುವರಿ ಮಾಡಿದವರಿಗೆ ಈಗಾಗಲೇ ನೋಟೀಸು ನೀಡಲಾಗಿದೆ ಉನ್ನತ ಅಧಿಕಾರಿಗೆ ಈ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದರು.
ಕೆಮ್ರಾಲ್ ಪೇಟೆಯಲ್ಲಿ ರಿಕ್ಷಾ ಪಾರ್ಕ್ ಹತ್ತಿರ ಚರಂಡಿ ಹಾಗೂ ಮೋರಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಬ್ಲಾಕ್ ಆಗಿ ಕೆಸರು ನೀರು ತುಂಬಿದೆ ರಿಕ್ಷಾ ಪಾರ್ಕ್ ಬಳಿ ವಾಸನೆ ಬರುತ್ತಿದೆ ಕಳೆದ ಮೂರು ವರ್ಷಗಳಿಂದ ಪದೆ ಪದೇ ದೂರು ನೀಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ರಿಕ್ಷಾ ಚಾಲಕರು ದೂರಿಕೊಂಡಾಗ ಉತ್ತರಿಸಿದ ಪಿಡಿಒ ರಮೇಶ್ ರಾಥೋಡ್ ಉದ್ಯೋಗ ಖಾತರಿ ಯೋಜನೆಯಲ್ಲಿ ಚರಂಡಿ ಕಾಮಾಗಾರಿ ಹಂತ ಹಂತವಾಗಿ ಮಾಡಲಾಗುತ್ತಿದೆ. ಆದಷ್ಟು ಶೀಘ್ರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಕೆಮ್ರಾಲ್ ಪ್ರಾಥಮಿಕ ಕೇಂದ್ರದ ಪ್ರದೀಪ್‌ಕುಮಾರ್, ಪಶು ಸಂಗೋಪನಾ ಇಲಾಖೆಯ ಕೆ. ಜಿ. ಮನೋಹರ್, ಕಂದಯ ಇಲಾಖೆಯ ಸಂತೋಷ್, ಮೆಸ್ಕಾಂ ಇಲಾಖೆಯ ಜಗದೀಶ್, ಪಂಚಾಯತ್ ರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಶ್ವಿನಿ, ಕೃಷಿ ಇಲಾಖೆಯ ಬಷೀರ್ ಇಲಾಖಾ ಮಾಹಿತಿ ನೀಡಿದರು.
ಹಳೇ ವಿದ್ಯುತ್ ಕಂಬಗಳ ಸ್ಥಳಾಂತರ, ಜೋತಾಡುತ್ತಿರುವ ತಂತಿಗಳು, ನೀರಿನ ಟ್ಯಾಂಕ್ ಬೇಡಿಕೆ ಹಾಗೂ ಮುಲ್ಲಡ್ಕ ಪರಿಸರಕ್ಕೆ ಹೆಚ್ಚುವರಿ ಸಾರ್ವಜನಿಕ ನಳ್ಳಿ ನೀರು ಬೇಡಿಕೆ ಮುಂತಾದವುಗಳ ಬಗ್ಗೆ ಚರ್ಚೆ ನಡೆಯಿತು.
ಅರಣ್ಯಾಧಿಕಾರಿ ಚಿದಾನಂದ ಸ್ವಾಮಿ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಮಂಗಳೂರು ತಾ. ಪಂ. ಸದಸ್ಯೆ ಶುಭಲತಾ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಪಿಡಿಒ ರಮೇಶ್ ರಾಥೋಡ್ ಸ್ವಾಗತಿಸಿದರು. ಕಾರ್ಯದರ್ಶಿ ಕೇಶವ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Kinnigol 20021901

Comments

comments

Comments are closed.

Read previous post:
Kinnigol-20021902
ಹಳೆಯಂಗಡಿ : ಸ್ತ್ರೀ ಶಕ್ತಿ ತರಬೇತಿ ಕಾರ್ಯಾಗಾರ

ಕಿನ್ನಿಗೋಳಿ : ಅಂಗನವಾಡಿ ಕೇಂದ್ರಗಳು ಮಹಿಳೆಯರ ಸಾಂತ್ವಾನ ಕೇಂದ್ರಗಳಾಗಿದ್ದು ಇಲ್ಲಿ ಶೋಷಿತ ಮಹಿಳೆಯರು ಮುಕ್ತವಾಗಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

Close