ಹಳೆಯಂಗಡಿ : ನಗರ ಪಾಲಿಕೆಗೆ ಸೇರಿಸಲು ಮನವಿ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷೆಯ ನಿಯೋಗ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರಲ್ಲಿ ಶನಿವಾರ ಮನವಿ ಮಾಡಿಕೊಂಡಿತು.
ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರದ ಸಮಯ ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜಾ ನೇತೃತ್ವದ ನಿಯೋಗ ಮನವಿ ಸಲ್ಲಿಸಿ ಪಂಚಾಯಿತಿ ಸುಮಾರು 1.26 ಕೋ.ರೂಗಳ ಆದಾಯ ಹೊಂದಿದ್ದು, ಪಾಲಿಕೆಯ ಎಲ್ಲಾ ಕಾನೂನುಗಳು ಪಂಚಾಯಿತಿಗೆ ಅನುಗುಣವಾಗುತ್ತಿದೆ. ಸಸಿಹಿತ್ಲು, ಪಾವಂಜೆ ಹಾಗೂ ಹಳೆಯಂಗಡಿ ಗ್ರಾಮಕ್ಕೆ ಮಹಾನಗರ ಪಾಲಿಕೆಯ ನೀತಿ ನಿಯಮಗಳೇ ಸಮಾನಾಂತರವಾಗಿ ಜಾರಿಯಲ್ಲಿದ್ದರೂ. ಅನುದಾನದ ಹಂತದಲ್ಲಿ ಹಿಂದಿದೆ ಆದುದರಿಂದ ಸಾಮಾನ್ಯ ಸಭೆಯಲ್ಲಿನ ನಿರ್ಣಯದಂತೆ ಅಭಿವೃದ್ಧಿ ಹೊಂದಲು ಪಾಲಿಕೆಗೆ ಸೇರಿಸಿದಲ್ಲಿ ಉತ್ತಮ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ನೀಡಲು ಸಾಧ್ಯ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ತಾಂತ್ರಿಕ ಮತ್ತು ಭೌಗೋಳಿಕ ಆಧಾರದಲ್ಲಿ ಪಾಲಿಕೆಗೆ ಸೇರ್ಪಡೆಗೆ ಸಾಧ್ಯವಿರುವ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಪಡೆದು ಸರ್ಕಾರಿ ಮಟ್ಟದಲ್ಲಿ ಮುಂದುವರಿಯುವುದಾಗಿ ಹೇಳಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಸದಸ್ಯ ಎಚ್. ವಸಂತ ಬೆರ್ನಾಡ್, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಲೆಟ್ ಪಿಂಟೋ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ, ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigol-23021903

Comments

comments

Comments are closed.

Read previous post:
Kinnigol-23021902
ಕಿನ್ನಿಗೋಳಿ : ಯು ಟಿ ಖಾದರ್ ಭೇಟಿ

ಕಿನ್ನಿಗೋಳಿ : ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕೊಲ್ಲೂರು ಪದವು ಸ್ಥಾವರಕ್ಕೆ ಶನಿವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಈ...

Close