ಕಿನ್ನಿಗೋಳಿ : ಉಜ್ವಲ ಅನಿಲ ಸಂಪರ್ಕ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಆರ್ಥಿಕ ಆದಾಯ ನಗರ ಪಂಚಾಯಿತಿಕ್ಕಿಂತ ಹೆಚ್ಚಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಹೆಳಿದರು.
ಶನಿವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಉಜ್ವಲ ಅನಿಲ ಸಂಪರ್ಕ ಮತ್ತು ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳ ಸೇರಿಸಿ ಪಟ್ಟಣ ಪಂಚಾಯಿತಿ ಮಾಡುವ ಪ್ರಸ್ತಾವನೆ ಕಳುಹಿಸಲಾಗಿದ್ದು ಆಗ ಹೆಚ್ಚಿನ ಅನುದಾನ ಬಳಸಿ ಗ್ರಾಮ ಅಭಿವೃದ್ದಿಪಡಿಸಲು ಸಾಧ್ಯ. ಅಧಿಕಾರಿಗಳು ಜನಪ್ರತಿನಿಧಿಗಳು ಒಗ್ಗೂಡಿ ಸರಕಾರದ ಸವಲತ್ತುಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರು.
ಈ ಸಂದರ್ಭ ಉಜ್ವಲ ಅನಿಲ ಸಂಪರ್ಕ ವಿತರಣೆ, ಶಿಕ್ಷಣ, ವೈದ್ಯಕೀಯ ವೆಚ್ಚ, ಮನೆದುರಸ್ತಿ, ಶವಸಂಸ್ಕಾರ ಮತ್ತಿತರ ಸವಲತ್ತುಗಳ ಚೆಕ್‌ಗಳನ್ನು ವಿತರಿಸಲಾಯಿತು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಮಾಜಿ ಸಚಿವ ಶಾಸಕ ಕೆ ಅಭಯಚಂದ್ರ ಜೈನ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ, ಪಂಚಾಯಿತಿ ಸದಸ್ಯರಾದ ಚಂದ್ರಶೇಖರ, ಟಿ..ಎಚ್ ಮಯ್ಯದ್ದಿ, ಸಂತಾನ್ ಡಿಸೋಜ ಮೂಲ್ಕಿ ವಿಶೇಷ ತಹಶಿಲ್ದಾರ್ ಮಾಣಿಕ್ಯ, ಕಾರ್ಯನಿರ್ವಹಣಾಧಿಕಾರಿ ರಘು, ಗ್ರಾಮಕರಣಿಕರು, ಅಧಿಕಾರಿಗಳು ಉಪಸ್ತಿತರಿದ್ದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Kinnigol-23021901

Comments

comments

Comments are closed.

Read previous post:
Kinnigol-20021904
ಕಮಲ್ ಕಪ್ ಮ್ಯಾಟ್ ಕಬ್ಬಡಿ ಪ್ರಶಸ್ತಿ ಆಳ್ವಾಸ್‌ಗೆ

ಕಿನ್ನಿಗೋಳಿ : ಸಂಘಟನಾ ಶಕ್ತಿ ಬಲಗೊಳ್ಳಲು ಕ್ರೀಡೆ ಅತ್ಯಗತ್ಯ ಕ್ರೀಡೆಯಿಂದ ಮಾನಸಿಕ ಬೆಳವಣಿಗೆಯೂ ಸಾಧ್ಯ ಎಂದು ಮೂಲ್ಕಿ ಮೂಡಬಿದಿರೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲು...

Close