ಶ್ರಿ ವಿದ್ಯಾವಿನಾಯಕ ಕಟ್ಟಡ ಲೋಕಾರ್ಪಣೆ

ಕಿನ್ನಿಗೋಳಿ : ಯುವ ಸಮುದಾಯಕ್ಕೆ ಸದೃಡ ಅಭಿವೃದ್ದಿ ಪರ ದೇಶ ಕಟ್ಟುವ ವಾತಾವರಣ ರೂಪಿಸಬೇಕು. ರಾಷ್ಟ್ರ ಜಾಗೃತಿಯ ಕಾರ್ಯಗಳನ್ನು ಸಂಘ ಸಂಸ್ಥೆಗಳು ಸಮಾಜದಲ್ಲಿ ಪಸರಿಸಬೇಕು ಎಂದು ದಕ್ಷಿಣಕನ್ನಡ ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು ಹೇಳಿದರು.
ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ನೂತನ ಕಟ್ಟಡವನ್ನು ರಜತ ಸೇವಾ ಟ್ರಸ್ಟ್ ಹಾಗೂ ಯುವತಿ ಮತ್ತು ಮಹಿಳಾ ಮಂಡಳಿಯ ಸಂಯುಕ್ತ ಸಂಯೋಜನೆಯಲ್ಲಿ ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಬಯಲು ಮೈದಾನ ಹಾಗೂ ವಾಚನಾಲಯವನ್ನು ದಕ್ಷಿಣಕನ್ನಡ ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು, ಗರಡಿ ಮನೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಎಂ.ಮೋಹನ್ ಆಳ್ವಾ, ಬೊಳ್ಳೂರು ವಾರಿಜ ವಾಸುದೇವ ಕಲಾ ವೇದಿಕೆಯನ್ನು ಪಂಜದಗುತ್ತು ಶಾಂತಾರಾಮ ಶೆಟ್ಟಿ ಹಾಗೂ ಸಾಯಿರಾಧಾ ಗ್ರೂಪ್ಸ್‌ನ ಮನೋಹರ್ ಎಸ್. ಶೆಟ್ಟಿ, ಗ್ಯಾಲರಿಯನ್ನು ಎಂಆರ್‌ಪಿಎಲ್‌ನ ಪ್ರಧಾನ ಪ್ರಬಂಧಕಿ ವೀಣಾ ಶೆಟ್ಟಿ, ಅಲಂಕಾರ ಕೊಠಡಿಯನ್ನು ಮುಂಬೈನ ನೇತ್ರಾ ಹರೀಶ್ ಕರ್ಕೇರ ಕರಿತೋಟ ಹಾಗೂ ದುಬೈನ ಮಾಧ್ಯಮ ಕಮ್ಯುನಿಕೇಶನ್‌ನ ನಿರ್ದೇಶಕ ಎಚ್.ಎಂ.ಅಫ್ರೋಜ್ ಅಸಾದಿ ದುಬೈ, ಸ್ಥಳದಾನದ ನಾಮಫಲಕವನ್ನು ಕೆ.ಶಿವರಾಂ ಶೆಟ್ಟಿ ಉಡುಪಿ ಹಾಗೂ ಜನರೇಟರ್ ವ್ಯವಸ್ಥೆಯನ್ನು ಮಂಜುನಾಥ ಕುಡ್ವ ಬೊಳ್ಳೂರು ಅವರು ಅನಾವರಣಗೊಳಿಸಿದರು.
ಕಟ್ಟಡ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಎನ್.ಶೆಟ್ಟಿ, ಅಧ್ಯಕ್ಷ ಬಿ. ಸೂರ್ಯಕುಮಾರ್ ಹಾಗೂ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್ ಅವರನ್ನು ಸನ್ಮಾನಿಸಲಾಯಿತು. ನೂತನ ಕಟ್ಟಡಕ್ಕೆ ಸಹಕಾರ ನೀಡಿದ ಜನಪ್ರತಿನಿಧಿಗಳು, ಕೊಡುಗೈ ದಾನಿಗಳನ್ನು ಗೌರವಿಸಲಾಯಿತು.
ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಬ್ಲೋಸಂ ಆಸ್ಕರ್ ಫೆರ್ನಾಂಡಿಸ್,
ಮಾಜಿ ಸಚಿವರಾದ ಕೆ.ಅಮರನಾಥ ಶೆಟ್ಟಿ, ಕೆ.ಅಭಯಚಂದ್ರ ಜೈನ್, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಪಾಣಾರ್, ಮಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ ಸೋಜಾ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ರಘುವೀರ್ ಎಸ್., ಬೆಹರಿನ್ ಕನ್ನಡ ಸಂಘದ ಭವನನ ಅಧ್ಯಕ್ಷ ಆಸ್ಟಿನ್ ಸಂತೋಷ್ ಕುಮಾರ್, ಸಾಯಿನಿಧಿ ಹೋಟೆಲ್ಸ್‌ನ ಪ್ರಬಂಧಕ ಎಚ್. ಭಾಸ್ಕರ ಸಾಲ್ಯಾನ್, ಯುವಕ ಮಂಡಲದ ಸ್ಥಾಪಕ ಸಮಿತಿ ಕೋಶಾಧಿಕಾರಿ ಉಮೇಶ್ ಬಿ. ಆಚಾರ್ಯ, ಸಲಹಾ ಸಮಿತಿ ಅಧ್ಯಕ್ಷ ಸದಾಶಿವ ಅಂಚನ್ ಚಿಲಿಂಬಿ, ಮಹಿಳಾ ಮಂಡಲ ಅಧ್ಯಕ್ಷೆ ಸುಜಾತ ವಾಸುದೇವ್, ಯುವತಿ ಮಂಡಲ ಅಧ್ಯಕ್ಷೆ ದಿವ್ಯಶ್ರೀ ರಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್ ಸ್ವಾಗತಿಸಿದರು. ಕಟ್ಟಡ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಪರಮೇಶ್ವರ್ ಪ್ರಸ್ತಾವನೈಗೈದರು, ರಾಮದಾಸ್ ಪಾವಂಜೆ, ಎಚ್.ರಾಮಚಂದ್ರ ಶೆಣೈ, ನಾಗೇಶ್ ಟಿ.ಜಿ., ಪರಿಚಯಿಸಿದರು.
ರಜತ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಟ್ಯಾನಿ ಡಿ ಕೋಸ್ತ ವಂದಿಸಿದರು. ನವೀನ್‌ಕುಮಾರ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

Kinnigol-24021901

Comments

comments

Comments are closed.

Read previous post:
Kinnigol-23021903
ಹಳೆಯಂಗಡಿ : ನಗರ ಪಾಲಿಕೆಗೆ ಸೇರಿಸಲು ಮನವಿ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷೆಯ ನಿಯೋಗ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರಲ್ಲಿ ಶನಿವಾರ ಮನವಿ ಮಾಡಿಕೊಂಡಿತು. ಹಳೆಯಂಗಡಿಯ ಮೂಲ್ಕಿ...

Close