ಕಿಲೆಂಜೂರು ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅನುದಾನದ ೫ ಲಕ್ಷ, ಹಾಗೂ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅನುದಾನದ ೩ ಲಕ್ಷದಲ್ಲಿ ನಿರ್ಮಾಣಗೊಂಡ ಕಿಲೆಂಜೂರು ಅಮಣಬೆಟ್ಟು ನೂತನ ಕಾಂಕ್ರೀಟ್ ರಸ್ತೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಈ ಸಂದರ್ಭ ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಜನಾರ್ಧನ ಕಿಲೆಂಜೂರು, ತಿಲಕ್ ರಾಜ್ ಶೆಟ್ಟಿ, ಗ್ರಾಮಸ್ಥರಾದ ರಾಘವೇಂದ್ರ ಉಡುಪ, ಶ್ರೀಧರ ಉಡುಪ, ದಯಾನಂದ ಶೆಟ್ಟಿ, ಶೇಖರ ಶೆಟ್ಟಿ, ಲೀಲಾಧರ ಶೆಟ್ಟಿ, ಗೋವಿಂದ ಪೂಜಾರಿ, ಶಶಿಧರ ಶೆಟ್ಟಿ, ಶ್ರೀಧರ ಆಚಾರಿ, ಶಾಂತರಾಮ ಆಚಾರಿ, ರಾಜೇಶ್ ಶೆಟ್ಟಿ, ಪ್ರೇಮ್ ರಾಜ್ ಶೆಟ್ಟಿ, ಸಚಿನ್ ಶೆಟ್ಟಿ ಭರತ್ ಶೆಟ್ಟಿ, ಸುಧಾಕರ ದೇವಾಡಿಗ, ಉಮೇಶ್ ಶೆಟ್ಟಿ, ಗುತ್ತಿಗೆದಾರ ಜಯಂತ್ ಸಾಲಿಯಾನ್, ಪಂಚಾಯತ್ ರಾಜ್ ಇಂಜಿನೀಯರ್ ಪ್ರಶಾಂತ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Kinnigol-24021902

Comments

comments

Comments are closed.

Read previous post:
Kinnigol-24021901
ಶ್ರಿ ವಿದ್ಯಾವಿನಾಯಕ ಕಟ್ಟಡ ಲೋಕಾರ್ಪಣೆ

ಕಿನ್ನಿಗೋಳಿ : ಯುವ ಸಮುದಾಯಕ್ಕೆ ಸದೃಡ ಅಭಿವೃದ್ದಿ ಪರ ದೇಶ ಕಟ್ಟುವ ವಾತಾವರಣ ರೂಪಿಸಬೇಕು. ರಾಷ್ಟ್ರ ಜಾಗೃತಿಯ ಕಾರ್ಯಗಳನ್ನು ಸಂಘ ಸಂಸ್ಥೆಗಳು ಸಮಾಜದಲ್ಲಿ ಪಸರಿಸಬೇಕು ಎಂದು ದಕ್ಷಿಣಕನ್ನಡ ಲೋಕಸಭಾ...

Close