ಹಳೆಯಂಗಡಿ : ತುಳು ನಾಟಕ ಸ್ಪರ್ಧೆ ಆರಂಭ

ಕಿನ್ನಿಗೋಳಿ : ಹಳೆಯಂಗಡಿಯಲ್ಲಿ ವಿದ್ಯಾವಿನಾಯಕ ಮಂಡಲದ ಮೂಲಕ ಯುವಕರು ಸಾಧನೆಗಳನ್ನು ಮಾಡಿ ಸಮಾಜ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಈಗ ತುಳು ಸಿನಿಮಾಗಳು ಜಾಸ್ತಿಯಾಗಿವೆ. ನಾಟಕಗಳೂ ಭಾಷೆ ಕಟ್ಟುವ ಕಾಯಕದಲ್ಲಿ ಮಹತ್ವ ಪಡೆದುಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ತಾಲೂಕು ಯುವ ಜನ ಒಕ್ಕೂಟ ಇವರ ಸಹಯೋಗದಲ್ಲಿ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲಗಳ ಆಶ್ರಯದಲ್ಲಿ ಹಳೆಯಂಗಡಿಯಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ತುಳು ಸಾಮಾಜಿಕ ನಾಟಕ ಸ್ಪರ್ಧೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ವಕೀಲ, ತಾಲೂಕು ಯುವ ಜನ ಒಕ್ಕೂಟದ ಗಿರೀಶ್ ಶೆಟ್ಟಿ ಮಾತನಾಡಿ ಸಂಘಟನೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಉತ್ತಮ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಕಟ್ಟಡ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಎನ್.ಶೆಟ್ಟಿ, ಅಧ್ಯಕ್ಷ ಬಿ. ಸೂರ್ಯಕುಮಾರ್ ಗೌರವ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಪಿ, ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್, ಮಹಿಳಾ ಮಂಡಲ ಅಧ್ಯಕ್ಷೆ ಸುಜಾತ ವಾಸುದೇವ್, ಯುವತಿ ಮಂಡಲ ಅಧ್ಯಕ್ಷೆ ದಿವ್ಯಶ್ರೀ ರಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ರಾಮದಾಸ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.

Kinnigol-25021901

Comments

comments

Comments are closed.

Read previous post:
Kinnigol-24021903
ಗುತ್ತಕಾಡು ಹುಚ್ಚುನಾಯಿ ನಿರೋಧಕ ಲಸಿಕಾ ಶಿಬಿರ

ಕಿನ್ನಿಗೋಳಿ : ಪಶು ಸಂಗೋಪನಾ ಇಲಾಖೆ ಹಾಗೂ ನವಚೈತನ್ಯ ಫ್ರೆಂಡ್ಸ್ ಗುತ್ತಕಾಡು ಆಶ್ರಯದಲ್ಲಿ ಗುತ್ತಕಾಡು ಬಸ್ಸುನಿಲ್ದಾಣದ ಬಳಿ ಉಚಿತ ಹುಚ್ಚುನಾಯಿ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಪಶುಸಂಗೋಪನಾ ಇಲಾಖೆಯ...

Close