ಬೊಳ್ಳೂರು : 36ನೇ ಧಪ್ ರಾತೀಬ್ ನೇರ್ಚೆ

ಕಿನ್ನಿಗೋಳಿ: ಮುಹಿಯದ್ದೀನ್ ಜುಮ್ಮಾ ಮಸೀದಿ(ರಿ), ಲಿಯಾವುಲ್ ಇಸ್ಲಾಂ ಧಫ್ ಕಮಿಟಿ ಬೊಳ್ಳೂರು ಹಳೆಯಂಗಡಿ ಇದರ 36ನೇ ಧಪ್ ರಾತೀಬ್ ನೇರ್ಚೆ ಹಾಗು ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ನಡೆಯಿತು.
ಬೊಳ್ಳೂರು ಮಸೀದಿಯ ಖತೀಬರಾದ ಶೈಖುನಾ ಅಲ್ ಹಾಜಿ ಅಝ್ಹರ್ ಫೈಝಿ’ ಹಾಜಿ ಪಿ. ಇಸ್ಮಾಯಿಲ್ ಮುಸ್ಲಿಯಾರ್, ಕೆ.ಎಚ್. ಹಸನ್ ಮುಸ್ಲಿಯಾರ್, ಹಾಜಿ ಪಂಡಿತ್ ಬಿ.ಎ. ಇದ್ದಿನಬ್ಬ ತೋಡಾರು ಇವರುಗಳ ನೇತ್ರತ್ವದಲ್ಲಿ ರಾತೀಬ್ ನೆರವೇರಿತು.
ಶೈಕುನ ಮೊಹಮ್ಮದ್ ಮಸ್ಲಿಯಾರ್ ಸಮಾರೋಪ ಸಮಾರಂಭ ಉದ್ಘಾಟಿಸಿದರು. ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮುಖ್ಯ ಪ್ರಭಾಷಣಗೈದರು.
ಶೈಖುನಾ ಅಸೈಯದ್ ಮಹಮ್ಮದ್ ಕೋಯ ಜಮಾಲುಬೈಲಿ ತಂಗಲ್ ದುವಾಃ ಆಶಿರ್ವಚನ ನೀಡಿದರು.
ಅಬ್ದುಲ್ ರಹಿಮಾನ್ ಫೈಝಿ ಖದೀಬರು ಜುಮ್ಮಾ ಮಸೀದಿ ಕದಿಕೆ, ಹಾಜಿ ಅಬ್ದುಲ್ ಕಾದರ್ ಮದನಿ ಖತೀಬರು ಜುಮ್ಮಾ ಮಸೀದಿ ಪಕ್ಷಿಕೆರೆ, ಅಬ್ದುಲ್ಲಾ ಮದನಿ ಖತೀಬರು ಜುಮ್ಮಾ ಮಸೀದಿ ಸಾಗ್, ಹನೀಫ್ ದಾರಿಮಿ ಸದರ್ ಮುಅಲ್ಲಿಂ ಇಂದಿರಾನಗರ, ಹಾಜಿ ಇಸ್ಮಾಯಿಲ್ ಮುಸ್ಲಿಯಾರ್ ಪ್ರಧಾನ ಧಫ್ ಉಸ್ತಾದ್ ಬೆಳ್ಳಾರೆ ಸುಳ್ಯ, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಎಂ. ಅಬ್ದುಲ್ ಕಾದರ್, ಐ.ಎ.ಕೆ. ಅಬ್ದುಲ್ ಅಝೀಝ್, ಅಬ್ದುಲ್ಲಾ ಕಲ್ಲಾಪು, ಸುಲೈಮಾನ್ ಕೊಪ್ಪಳ, ಹಾಜಿ ಅಬ್ದುಲ್ ಕಾದರ್ ಐ.ಎ.ಕೆ, ಬಸೀರ್ ಪರಂಗಿಬೆಟ್ಟು, ಹಾಗು ಕರೀಮ್ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ನಾಸಿರ್ ಮದನಿ ಸ್ವಾಗತಿಸಿದರು. ಮೈಯದ್ದಿ ಇಂದಿರಾನಗರ ಕಾರ್ಯಕ್ರಮ ನಿರೂಪಿಸಿದರು.

Kinnigoli-26021904

Comments

comments

Comments are closed.

Read previous post:
Kinnigoli-26021901
ಪುನರೂರು ಹಗಲು ರಥೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಳದ ವರ್ಷಾವಧಿ ಜಾತ್ರೆಯ ಅಂಗವಾಗಿ ಸೋಮವಾರ ಹಗಲು ರಥೋತ್ಸವ ನಡೆಯಿತು.

Close