ಕುಡಿತದ ಬಗ್ಗೆ ಜನರೇ ಎಚ್ಚರಗೊಳ್ಳಬೇಕು

ಕಿನ್ನಿಗೋಳಿ : ಕುಡಿತದ ಬಗ್ಗೆ ಜನರೇ ಎಚ್ಚರಗೊಳ್ಳಬೇಕು, ಕುಡಿತದಿಂದ ಆರೋಗ್ಯವೂ ಕೆಡುತ್ತದೆ ಅಲ್ಲದೇ ಅವಲಂಬಿಸಿದ ಕುಟುಂಬಕ್ಕೂ ದುಷ್ಪರಿಣಾಮ ನಿಶ್ಚಿತ. ಜನರಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು ಎಂದು ಮಂಗಳೂರು ಕೃಪಾ ಫೌಂಡೇಶನ್‌ನ ಎಲಿಯಾಸ್ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸಭಾಂಗಣದಲ್ಲಿ ಮಂಗಳೂರಿನ ಡಾ. ಎಂ.ವಿ.ಶೆಟ್ಟಿ ಸಮಾಜ ಕಾರ್ಯ ಕಾಲೇಜು ಆಶ್ರಯದಲ್ಲಿ ನಡೆಯುತ್ತಿರುವ ಗ್ರಾಮೀಣ ಶಿಬಿರದಲ್ಲಿ ಕುಡಿತದ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ತೋಕೂರು ಯುವಕ ಸಂಘದ ಅಧ್ಯಕ್ಷ ಹೇಮನಾಥ್ ಅಮೀನ್, ಡಾ. ಎಂ. ವಿ.ಶೆಟ್ಟಿ ಕಾಲೇಜು ಉಪನ್ಯಾಸಕಿ ಮತ್ತು ಶಿಬಿರಾಧಿಕಾರಿ ನೀವೇದಿತಾ ಎಂ. ಕಾಮತ್, ವಿದ್ಯಾರ್ಥಿ ಸಂಯೋಜಕ ಪ್ರದೀಪ್ ಉಪಸ್ಥಿತರಿದ್ದರು.
ಕಾಲೇಜಿನ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳಿಂದ ಕುಡಿತದ ದುಷ್ಪರಿಣಾಮಗಳ ಬಗ್ಗೆ ಕಿರು ನಾಟಕ ಪ್ರದರ್ಶನಗೊಂಡಿತು.

Kinnigol-27021905

Comments

comments

Comments are closed.

Read previous post:
Kinnigol-27021904
ಕೆರೆಕಾಡು : ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ : ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ನಂತರ ವಿಶ್ವವೇ ಭಾರತದ ಶಕ್ತಿಯನ್ನು ಗುರುತಿಸಿರುವುದರಿಂದ ಇಂದು ಭಾರತ ಬಹಳಷ್ಟು ಎತ್ತರಕ್ಕೇರಿದೆ. ಎಂದು ಜಿಲ್ಲಾ ಬಿಜೆಪಿ ಸದಸ್ಯ ಕೆ.ಭುವನಾಭಿರಾಮ ಉಡುಪ...

Close