ಪೊಂಪೈ : ಫ್ರುಡೆನ್ಷಿಯಾ 2019 ವಾಣಿಜ್ಯ ಉತ್ಸವ

ಕಿನ್ನಿಗೋಳಿ : ಪೊಂಪೈ ಕಾಲೇಜು, ಐಕಳ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಫ್ರುಡೆನ್ಷಿಯಾ 2019 ರಾಜ್ಯ ಮಟ್ಟದ ವಾಣಿಜ್ಯ ವಿದ್ಯಾರ್ಥಿಗಳ ಸಮ್ಮೇಳವನ್ನು ಆಯೋಜಿಸಿತು.
ಗಿಡಕ್ಕೆ ನೀರೆರೆದು ಸಮ್ಮೇಳವನ್ನು ಉದ್ಘಾಟಿಸಿದ ಪೊಂಪೈ ವಿದ್ಯಾಸಂಸ್ಥೆಗಳ ಸಂಚಾಲಕ ರೆ. ಫಾ. ವಿಕ್ಟರ್ ಡಿಮೆಲ್ಲೊ ಮಾತನಾಡಿ ಗಿಡವು ಯಾವ ರೀತಿ ನೀರನ್ನು ಹೀರಿ ಹೆಮ್ಮರವಾಗುತ್ತದೋ ಅದೇ ರೀತಿ ವಿದ್ಯಾರ್ಥಿಗಳು ಜ್ಞಾನಸುಧೆಯನ್ನು ಪಡೆದು ಸಮಾಜದಲ್ಲಿ ಎತ್ತರಕ್ಕೆ ಬೆಳೆದು ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ಕಛೇರಿ ಮುಖ್ಯಸ್ಥ ರೊಕಿ ಜಿ. ಲೋಬೊ, ಉಪನ್ಯಾಸಕರಾದ ತಿಲಕ್, ಮುರಳಿ, ಕು.ದಿವ್ಯಶ್ರಿ ಹಾಗೂ ವಿದ್ಯಾರ್ಥಿ ಸಂಯೋಜಕರಾದ ಗೇವಿನ್ ಮತ್ತು ವಿಶ್ವಿತಾ ಉಪಸ್ಥಿತರಿದ್ದರು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಹೊಳ್ಳ ಪ್ರಸ್ತಾವನೆಗೈದರು. ರು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ವೆನಿಸಾ ಮರಿಯ ಡಿ ಕುನ್ಹಾ ಕಾರ್ಯಕ್ರಮ ನಿರೂಪಿಸಿದರು.
ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಿವಿಧ ಸ್ಪರ್ದೆಗಳಲ್ಲಿ 16 ಕಾಲೇಜುಗಳಿಂದ ೮೦ ಮಂದಿ ಭಾಗವಹಿಸಿದ್ದರು.

Kinnigol-27021902

Comments

comments

Comments are closed.

Read previous post:
Kinnigol-27021901
ತ್ಯಾಜ್ಯ ನಿರ್ವಹಣೆ ಕುರಿತು ಮನೆ ಭೇಟಿ

ಕಿನ್ನಿಗೋಳಿ: ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ), ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಪಡುಪಣಂಬೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ...

Close