ಕಟೀಲು ಮಲ್ಲಿಗೆಯಂಗಡಿ ರಸ್ತೆ ಶಿಲನ್ಯಾಸ

ಕಿನ್ನಿಗೋಳಿ : ಗ್ರಾಮೀಣ ಭಾಗದಲ್ಲಿ ಅನೇಕ ರಸ್ತೆಗಳು ಇನ್ನೂ ಕಾಂಕ್ರೀಟಿಕರಣಗೊಂಡಿಲ್ಲ ಮಂದಿನ ದಿನದಲ್ಲಿ ಹಂತ ಹಂತವಾಗಿ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಕಟೀಲು ಮಲ್ಲಿಗೆಯಂಗಡಿಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗೋಪಾಲಕೃಷ್ಣ ಆಸ್ರಣ್ಣ ರಸ್ತೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಕಟೀಲಿಗೆ ಬೈಪಾಸ್ ರಸ್ತೆಯಂತಿರುವ ಈ ರಸ್ತೆ ಕಟೀಲು ದೇವಳದಲ್ಲಿ ನಡೆಯುವ ಹಬ್ಬ ಹರಿದಿನ ಜಾತ್ರೆ ಸಮಯ ವಾಹನ ಸಂಚಾರ ಬ್ಲಾಕ್ ಆಗಬಾರದೆಂದು ಮನಗಂಡು ಹಾಗೂ ಸ್ಥಳೀಯರಿಗೆ ಅನುಕೂಲವಾಗುವಂತೆ ರಸ್ತೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಅರುಣ್ ಕುಮಾರ್, ಜನಾರ್ಧನ ಕಿಲೆಂಜೂರು, ತಿಲಕ್ ರಾಜ್ ಶೆಟ್ಟಿ ದಯಾನಂದ ಶೆಟ್ಟಿ, ಕೊಡೆತ್ತೂರು ಅರಸುಕುಂಜಿರಾಯ ದೈವಸ್ಥಾನದ ಜಯರಾಮ ಮುಕಾಲ್ದಿ, ಟ್ರಸ್ಟ್ ನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮೂಲ್ಕಿ ಮೂಡಬಿದಿರೆ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್, ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲು, ಕೆ. ಭುವನಾಭಿರಾಮ ಉಡುಪ, ಚಂದ್ರಕುಮಾರ್ ಬರ್ಕೆ, ಶ್ರೀಧರ ಆಳ್ವ ಮಾಗಂದಡಿ , ಲೋಕಯ್ಯ ಸಾಲಿಯಾನ್, ಪುಷ್ಪರಾಜ್ ಚೆಳಾರ್, ಸದಾನಂದ ಶೆಟ್ಟಿ, ಪ್ರಸಾದ್ ಶೆಟ್ಟಿ, ಇಂಜಿನಿಯರ್ ಪ್ರಶಾಂತ್ ಆಳ್ವ, ಗುತ್ತಿಗೆದಾರ ಜಯಂತ್ ಮತ್ತಿತರರು ಉಪಸ್ಥಿತರಿದ್ದರು.

Kinnigol-28021908

Comments

comments

Comments are closed.

Read previous post:
Kinnigol-28021903
ಕಟೀಲು : ಕಾಲೇಜಿಗೆ ಐದು ಚಿನ್ನದ ಪದಕ

ಕಿನ್ನಿಗೋಳಿ : ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2017-18ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5 ಮತ್ತು 6ನೇ ಸೆಮಿಸ್ಟರ್‌ನ ಫ಼ೈನಾನ್ಷಿಯಲ್ ಅಕೌಂಟಿಂಗ್ ವಿಷಯದಲ್ಲಿ 300ರಲ್ಲಿ 300 ಅಂಕ ಪಡೆದು...

Close