ಮೇರಾಬೂತ್ ಸಬ್ ಸೇ ಮಜಬೂತ್

ಕಿನ್ನಿಗೋಳಿ : ಭಾರತೀಯ ಜನತಾ ಪಾರ್ಟ ಮೂಲ್ಕಿ ಮೂಡಬಿದಿರೆ ಮಂಡಲದ ಮೇರಾಬೂತ್ ಸಬ್ ಸೇ ಮಜಬೂತ್‌ನ ನಾಲ್ಕು ಮಹಾಶಕ್ತಿ ಕೇಂದ್ರದ (ಕಟೀಲು, ಬಜಪೆ, ಕಿನ್ನಿಗೋಳಿ, ಮೂಲ್ಕಿ) ಕಾರ್ಯಕ್ರಮ ಗುರುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಹಾಶಕ್ತಿ ಕೇಂದ್ರಕ್ಕೆ ಒಳಪಟ್ಟ ಎಲ್ಲಾ ಸ್ಥಾನೀಯ ಸಮಿತಿಯ ಸದಸ್ಯರು ಹಾಜರಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸಂವಾದದಲ್ಲಿ ಪಾಲ್ಗೊಂಡರು. ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಕೋರ್ ಸಮಿತಿಯ ಸದಸ್ಯ ದ.ಕ.ಜಿಲ್ಲಾ ಪ್ರಭಾರಿ ಉದಯಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೆ. ಭುವನಾಭಿರಾಮ ಉಡುಪ, ಮೂಲ್ಕಿ ಮೂಡಬಿದಿರೆ ಮಂಡಲ ಅಧ್ಯಕ್ಷರಾದ ಈಶ್ವರ ಕಟೀಲು, ಪ್ರಧಾನ ಕಾರ್ಯದರ್ಶಿ ಜಯಾನಂದ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.

Kinnigol-28021901

Comments

comments

Comments are closed.

Read previous post:
Kinnigol-27021905
ಕುಡಿತದ ಬಗ್ಗೆ ಜನರೇ ಎಚ್ಚರಗೊಳ್ಳಬೇಕು

ಕಿನ್ನಿಗೋಳಿ : ಕುಡಿತದ ಬಗ್ಗೆ ಜನರೇ ಎಚ್ಚರಗೊಳ್ಳಬೇಕು, ಕುಡಿತದಿಂದ ಆರೋಗ್ಯವೂ ಕೆಡುತ್ತದೆ ಅಲ್ಲದೇ ಅವಲಂಬಿಸಿದ ಕುಟುಂಬಕ್ಕೂ ದುಷ್ಪರಿಣಾಮ ನಿಶ್ಚಿತ. ಜನರಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು ಎಂದು ಮಂಗಳೂರು ಕೃಪಾ...

Close