ಬಳ್ಕುಂಜೆ : ಉಜ್ವಲ ಅನಿಲ ಯೋಜನೆ ವಿತರಣೆ

ಕಿನ್ನಿಗೋಳಿ : ಪ್ರಧಾನಿ ಮೋದಿಯವರು ಬಡವರ ಕಷ್ಠಗಳನ್ನು ಹತ್ತಿರದಿಂದ ಬಲ್ಲವರಾಗಿದ್ದು ಉಜ್ವಲ ಯೋಜನೆಯಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಬಳ್ಕುಂಜೆ ಪಂಚಾಯಿತಿ ಸಭಾಭವನದಲ್ಲಿ ಉಜ್ವಲ ಅನಿಲ ಯೋಜನೆ ಮತ್ತು ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ಆಯ್ಯುಷ್ಮಾನ್‌ಭವ ಯೋಜನೆ, ಯುವಜನತೆಗೆ ಸ್ವ ಉದ್ಯೋಗವನ್ನು ಪ್ರೋತ್ಸಾಹಿಸಲು ಮುದ್ರಾ ಯೋಜನೆ ಮತ್ತಿತರರ ಯೋಜನೆಗಳಿಂದ ಪ್ರಧಾನಿ ಎಲ್ಲಾ ವರ್ಗದ ಜನರ ಗಮನ ಸೆಳೆದಿದ್ದಾರೆ ಎಂದರು.
ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲು, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮೀ ಆಚಾರ್ಯ, ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರ, ಪಂಚಾಯಿತಿ ಸದಸ್ಯರಾದ ಪ್ರಭಾಕರ ಶೆಟ್ಟಿ, ಪ್ರಸಾದ್ ಶೆಟ್ಟಿ, ಮಮತಾ ಪೂಂಜ, ಗೀತಾ ನಾಯ್ಕ್, ನವೀನ್ ಶೆಟ್ಟಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-05031903

Comments

comments

Comments are closed.

Read previous post:
Kinnigoli-05031904
ಎಳತ್ತೂರು ಪಡ್ಲಾಕ್ಯಾರ್ ಕೆರೆ ರಸ್ತೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳತ್ತೂರು ಪಡ್ಲಾಕ್ಯಾರ್ ಕೆರೆ ರಸ್ತೆ ಕಾಂಕ್ರೀಟಿಕರಣಕ್ಕೆಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭ ದ.ಕ. ಜಿಲ್ಲಾ...

Close