ಕಟೀಲು : ಹೊರೆಕಾಣಿಕೆ ಕಚೇರಿ ಉದ್ಘಾಟನೆ

ಕಿನ್ನಿಗೋಳಿ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಶ್ರೀ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾಬ್ರಹ್ಮಕಲಶಾಭಿಷೇಕ ಮಹೋತ್ಸವ 13-03-2019ರತನಕ ಜರಗಲಿದ್ದು, ಆ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಕಟೀಲು-ಅತ್ತೂರು-ಕೊಡೆತ್ತೂರು-ಎಕ್ಕಾರು-ಶಿಬರೂರು ಕಿನ್ನಿಗೋಳಿ-ಪುನರೂರು ಭಕ್ತವೃಂದದ ಪರವಾಗಿ ಹೊರೆ ಕಾಣಿಕೆಯ ಮೆರವಣಿಗೆಯು ದಿನಾಂಕ 07-03-2019ನೇ ಗುರುವಾರ ಮಧ್ಯಾಹ್ನ ಗಂಟೆ 2.30ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಹೊರಡಲಿರುವುದು. ಕಾರ್ಯಕ್ರಮದ ಪೂರ್ವಭಾವಿಯಾಗಿ ಹೊರೆಕಾಣಿಕೆ ಕಚೇರಿಯನ್ನು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಈ ಸಂದರ್ಭ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು, ಯುಗಪುರುಷದ ಭುವನಾಭಿರಾಮ ಉಡುಪ, ಈಶ್ವರ ಕಟೀಲು, ಗಂಗಾಧರ ಸಾಲ್ಯಾನ್, ಲೋಕಯ್ಯ ಸಾಲ್ಯಾನ್, ರಾಘವೇಂದ್ರ ಭಟ್, ತಿಮ್ಮಪ್ಪ ಕೋಟ್ಯಾನ್, ಕಿಶೋರ್ ಶೆಟ್ಟಿ, ರಾಮದಾಸ ಕಾಮತ್, ಬಾಲಕೃಷ್ಣ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-05031906

Comments

comments

Comments are closed.

Read previous post:
Kinnigoli-05031907
ಎಳತ್ತೂರು ಶ್ರಮದಾನ

ಕಿನ್ನಿಗೋಳಿ : ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಗ್ರಾಮಸ್ಥರ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶ್ರಮದಾನ ನಡೆಯಿತು.

Close