ಶಾಂತಿ ಪಲ್ಕೆ ಮಹಾಂಕಾಳಿ ನೇಮ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶಾಂತಿಪಲ್ಕೆಯ ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ಹಾಗೂ ಪರಿವಾರ ದ್ಯೆವಗಳ ವಾರ್ಷಿಕ ನೇಮೋತ್ಸವವು ಮಾರ್ಚ್ 8 ರಿಂದ 10 ರ ವರೆಗೆ ಜರಗಲಿದೆ. ಮಾರ್ಚ್ 8 ರ ಶುಕ್ರವಾರ ಬೆಳಿಗ್ಗೆ ಗಣಹೋಮ,ದೈವಗಳ ಭಂಡಾರ ಆಗಮನ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಉಳ್ಳಾಯ ದೈವ, ಮಹಾಂಕಾಳಿ ದೈವದ ನೇಮೋತ್ಸವ, ಮಾರ್ಚ್ 9 ರ ಶನಿವಾರ ರಾತ್ರಿ ಬ್ರಹ್ಮಮುಗೇರ ಹಾಗೂ ತಂಗಡಿ ದೈವದ ನೇಮೋತ್ಸವ, ಮಾರ್ಚ್ 10 ರ ಭಾನುವಾರ ಬೆಳಿಗ್ಗೆ ಅಲೇರಾ ಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ ಭಂಡಾರ ನಿರ್ಗಮನ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigol-28021902
ಭಜನೆ ಸಂಸ್ಕೃತಿ ಸಂಸ್ಕಾರದ ಪ್ರತೀಕ

ಕಿನ್ನಿಗೋಳಿ : ಭಜನೆಯು ಸಂಸ್ಕೃತಿ ಸಂಸ್ಕಾರದ ಪ್ರತೀಕ. ಎಂದು ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು. ಕಮ್ಮಾಜೆ ನೇಕಾರ ಕಾಲೋನಿ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಅಹೋರಾತ್ರಿ...

Close