ಹಳೆಯಂಗಡಿ ನಾಟಕ ಸ್ಪರ್ಧೆ

ಕಿನ್ನಿಗೋಳಿ : ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್ ಆಯೋಜಿಸಿದ ತುಳು ಸಾಮಾಜಿಕ ನಾಟಕ ಸ್ಪರ್ಧೆಯಲ್ಲಿ ಉಡುಪಿ ಪುತ್ತೂರಿನ ರಂಗ ಕಲಾವಿದರು ಪ್ರದರ್ಶಿಸಿದ ಈ ಪೊಣ್ಣು ಏರ್ ಪ್ರಥಮ ಬಹುಮಾನ, ಮಂಗಳೂರು ಜೈ ಮಾತಾ ಕಲಾ ತಂಡ ಪ್ರದರ್ಶಿಸಿದ ಒಂತೆ ಕಾಪುಲೆ ದ್ವಿತೀಯ ಬಹುಮಾನ, ಅಲೆವೂರು ಅಭಿನಯ ಕಲಾವಿದರು ಪ್ರದರ್ಶಿಸಿದ ಬರಂದೆ ಕುಲ್ಲಯೆ ತೃತೀಯ ಬಹುಮಾನವನ್ನು ಪಡೆದಿದೆ.
ಸಮಾಧಾನಕರ ಬಹುಮಾನವನ್ನು ಶ್ರೀ ಶಾರದಾ ಕಲಾವಿದರು, ಕಡೇಕಾರ್ ಸನ್ನಿಧಿ ಕಲಾವಿದರು, ಬೆಳ್ಮಣ್ ಹಳೆ ವಿದ್ಯಾರ್ಥಿ ಸಂಘ, ಕುಡ್ಲ ತಾಂಬೂಲ ಕಲಾವಿದೆರ್ ಪಡೆದರು.
ಉತ್ತಮ ಕಥಾ ನಾಯಕನಾಗಿ ಉಡುಪಿಯ ಸಂತೋಷ್ ಡಿ. ಪಲಿಮಾರ್, ಕಥಾ ನಾಯಕಿಯಾಗಿ ಸಚಿನ್ ಬೈಲೂರು, ಖಳನಾಯಕನಾಗಿ ಕಲ್ಪೇಶ್ ಶೆಟ್ಟಿ ಕಟೀಲ್, ಪೋಷಕ ನಟನಾಗಿ ರವಿ ಕುಮಾರ್ ಕಡೇಕಾರ್, ಉತ್ತಮ ಹಾಸ್ಯಕ್ಕಾಗಿ ಸುಕೇಶ್ ಶೆಟ್ಟಿ ಪಡುಪದವು, ಉತ್ತಮ ನಿರ್ದೇಶಕರಾಗಿ ದಿನೇಶ್ ಆಚಾರ್ಯ ಉಡುಪಿ, ಉತ್ತಮ ರಂಗ ವಿನ್ಯಾಸಕ್ಕಾಗಿ ಸೂರಿ ಪೇಜಾವರ ಮತ್ತು ಬಳಗ, ಔಚಿತ್ಯಪೂರ್ಣ ಬೆಳಕಿಗಾಗಿ ದೇವದಾಸ್ ಕಡೇಕಾರ್, ಔಚಿತ್ಯಪೂರ್ಣ ಸಂಗೀತಕ್ಕಾಗಿ ಶರತ್ ಉಚ್ಚಿಲ ವೈಯಕ್ತಿಕ ಬಹುಮಾನಗಳನ್ನು ಪಡೆದರು.
ಬಹುಮಾನ ವಿತರಣೆ ಸಮಾರಂಭದಲ್ಲಿ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಮೊಕ್ತೇಸರ ಶಶೀಂದ್ರ ಕುಮಾರ್, ಡಾ. ಮಧುಕರ್, ಎನ್. ವಿದ್ಯಾಧರ ಶೆಟ್ಟಿ, ಚಂದ್ರಶೇಖರ ನಾನಿಲ್, ಲಿಲ್ಲಿ ಪಾಯಸ್, ಯುವಕ ಮಂಡಲದ ಬಿ. ಸೂರ್ಯಕುಮಾರ್, ಸುಧಾಕರ ಅಮೀನ್, ಮಹಿಳಾ ಮಂಡಲದ ಸುಜಾತಾ ವಾಸುದೇವ್, ಯುವತಿ ಮಂಡಲದ ದಿವ್ಯ ರಮೇಶ್ ಕೋಟ್ಯಾನ್, ಸದಾಶಿವ ಅಂಚನ್, ಚಂದ್ರಶೇಖರ್ ಜಿ. ಮತ್ತಿತರರು ಉಪಸ್ಥಿತರಿದ್ದರು.

Kinnigoli-07031906

Comments

comments

Comments are closed.

Read previous post:
Kinnigoli-07031905
ಕಿಲೆಂಜೂರು ಸ್ವಯಂಚಾಲಿತ ದಾರಿ ದೀಪದ ಉದ್ಘಾಟನೆ

ಕಿನ್ನಿಗೋಳಿ : ಕಿಲೆಂಜೂರು ಅಮಣಬೆಟ್ಟು ರಸ್ತೆಗೆ 2 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ನೂತನ ಸ್ವಯಂಚಾಲಿತ ದಾರಿ ದೀಪದ ಉದ್ಘಾಟನೆಯನ್ನು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿದರು. ಈ...

Close