ಕೊಡೆತ್ತೂರು ವರ್ಷಾವಧಿ ಜಾತ್ರಾ ಮಹೋತ್ಸವ

ಕಿನ್ನಿಗೋಳಿ : ಕೊಡೆತ್ತೂರು ಶ್ರೀ ಅರಸುಕುಂಜರಾಯ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮಾರ್ಚ್ 8 ರಿಂದ 11 ರವರೆಗೆ ನಡೆಯಲಿದೆ.
ಮಾ. 8 ರಂದು ಬೆಳಿಗ್ಗೆ 8.30 ಗಂಟೆಗೆ ಭಂಡಾರ ಸ್ಥಾನದಿಂದ ಅರಸು ಕುಂಜರಾಯರ ಭಂಡಾರ ಆಗಮನ ಧ್ವಜಾರೋಹಣ ಶಿಬರೂರು ಉಳ್ಳಾಯ ಹಾಗೂ ಕೊಡಮಣಿತ್ತಾಯ ದೈವ ಹಾಗೂ ವಿವಿಧ ದೈವಗಳ ಭಂಡಾರ ಆಗಮನ, ರಾತ್ರಿ 9 ಗಂಟೆಗೆ ಅರಸು ಕುಂಜಿರಾಯ ದೈವದ ನೇಮೋತ್ಸವ ನಡೆಯಲಿದೆ.
ಮಾ. 9 ರಂದು ಬೆಳಿಗ್ಗೆ 7 ಗಂಟೆಗೆ ಉಳ್ಳಾಯ ದೈವದ ನೇಮೋತ್ಸವ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ರಾತ್ರಿ 7.30ತೇರಿ ಧೂಮಾವತಿ ಬಂಟ ದೈವಗಳ ನೇಮೋತ್ಸವ ನಡೆಯಲಿದೆ. ಮಾ. 10 ರಂದು ರಾತ್ರಿ 8 ನೃತ್ಯ ಪ್ರದರ್ಶನ, ಜನನಿ ಮೆಲೋಡಿಸ್ ಸಂಸ್ಥೆಯ ಪ್ರಕಾಶ್ ಆಚಾರ್ಯ ಬಳಗದವರಿಂದ ಸಂಗೀತ ರಸ ಮಂಜರಿ ನಡಯಲಿದೆ. ರಾತ್ರಿ 8 ಗಂಟೆಗೆ ಕೋರ‍್ದಬ್ಬು ದೈವದ ಭಂಡಾರ ಆಗಮನ. ರಾತ್ರಿ 10 ರಿಂದ ಬಡಗ ಎಕ್ಕಾರು ಜಾರಾಂದಯ ಜಾರಂತಾಯ ಬಂಟ ದೈವದ ನೇಮೋತ್ಸವ, ರಾತ್ರಿ 11 ಗಂಟೆ, ಜಾರಾಂದಾಯ -ಕೋರ‍್ದಬ್ಬು ದೈವದ ಬೇಟಿ ರಾತ್ರಿ 1 ಗಂಟೆಗೆ ಸರಳ ಧೂಮಾವತಿ, ಪಿಲಿಚಂಡಿ ದೈವದ ನೇಮೋತ್ಸವ ಮಾ.11 ರಂದು ಧ್ವಜಾವರೋಹಣ ಭಂಡಾರ ನಿರ್ಗಮನವಾಗಲಿದೆ ಎಂದು ದೈವಸ್ಥಾನದ ಅಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-07031907
ಮೆನ್ನಬೆಟ್ಟು ಉಜ್ವಲ ಅನಿಲ ಯೋಜನೆ ವಿತರಣೆ

ಕಿನ್ನಿಗೋಳಿ : ಬಡ ವರ್ಗದ ಜನತೆಗೆ ಉಜ್ವಲ ಅನಿಲ ಯೋಜನೆಯಿಂದ ಬಹಳಷ್ಟು ಅನುಕೂಲವಾಗಿದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ...

Close