ತೋಕೂರು ವಿವಿಧ ಯೋಜನೆ ಉದ್ಘಾಟನೆ

ಕಿನ್ನಿಗೋಳಿ : ಮೂಲ ಸೌಕರ್ಯಗಳಾದ ನೀರು ಹಾಗೂ ರಸ್ತೆ ಅಭಿವೃದ್ಧಿಯನ್ನು ಸಮಾನವಾಗಿ ಹಂಚುವ ನಿಟ್ಟಿನಲ್ಲಿ ಅಲ್ಪ ಸಂಖ್ಯಾತ ಜನರು ವಾಸಿಸುವ ಪ್ರದೇಶಗಳಿಗೆ ಅಲ್ಪ ಸಂಖ್ಯಾತ ನಿಧಿಯಿಂದ ಸುಮಾರು ೭ಕೋಟಿರೂ ವೆಚ್ಚದ ರಸ್ತೆ ಸಂಪರ್ಕ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತನೇ ತೋಕೂರು ಗ್ರಾಮದ ಸಂಪರ್ಕ ರಸ್ತೆಯನ್ನು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ನಿಧಿಯ ರೂ 5 ಲಕ್ಷದ ಕಾಂಕ್ರೀಟಿಕರಣ ಹಾಗೂ ಎನ್‌ಆರ್‌ಇಜಿ ಯೋಜನೆಯಲ್ಲಿ ಮೂರು ಲಕ್ಷರೂ ವೆಚ್ಚದ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ನೆನೆಗುದಿಗೆ ಬಿದ್ದಿದ್ದ ತೋಕೂರು ಜಲಕದ ಕೆರೆ ಅಭಿವೃದ್ಧಿಗಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 2ಕೋಟಿ ರೂ ಅನುದಾನವನ್ನು ಬೆಂಗಳೂರಿಗೆ ತೆರಳಿ ಮಂಜೂರು ಮಾಡಿಸಿದ್ದೇನೆ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯ ದೀವಾಕರ ಕರ್ಕೇರಾ ಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೊಳ್ಳೂರು, ಪಡುಪಣಂಬೂರು ಗ್ರಾ. ಪಂ. ಅಧ್ಯಕ್ಷ ಮೋಹನದಾಸ್ ತೋಕೂರು, ಸದಸ್ಯರಾದ ಹೇಮಂತ ಕುಮಾರ್, ಲೀಲಾ ಭಂಜನ್, ಪುಷ್ಪಾವತಿ, ಸಂತೋಷ್ ಕುಮಾರ್, ವಿನೋದ್ ಸಾಲ್ಯಾನ್, ಮಾಜಿ ಸದಸ್ಯ ದುರ್ಗಾದಾಸ್, ಚಂದ್ರಶೇಖರ ದೇವಾಡಿಗ, ಸುದರ್ಶನ್ ಬಂಗೇರಾ, ಲೋಹಿತ್ ಕೋಟ್ಯಾನ್, ರಾಜೇಶ್ ದಾಸ್, ಸಂದೀಪ್, ಶಿವಾಜಿ, ಸಂತೋಷ್ ಶೆಟ್ಟಿ, ಹೇಮಂತ್ ಕುಮಾರ್, ಗುತ್ತಿಗೆದಾರ ಬಶೀರ್ ಮತ್ತಿತರರಿದ್ದರು.

Kinnigoli-07031903

Comments

comments

Comments are closed.

Read previous post:
Kinnigoli-07031902
ಕೊಯಿಕುಡೆ ಉಲ್ಯ ಕಾಂಕ್ರೀಟಿಕರಣ ರಸ್ತೆ

ಕಿನ್ನಿಗೋಳಿ : ಕೊಯಿಕುಡೆ ಉಲ್ಯ ನೂತನ ಕಾಂಕ್ರೀಟಿಕರಣ ರಸ್ತೆಯನ್ನು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ,...

Close