ಕಲಿಕೆ ಮತ್ತು ಸತತ ಪಯತ್ನದಿಂದ ಜ್ಞಾನ ಶಕ್ತಿ ವೃದ್ದಿ

ಕಿನ್ನಿಗೋಳಿ : ಏಕಾಗ್ರತೆಯ ಕಲಿಕೆ ಮತ್ತು ಸತತ ಪಯತ್ನದಿಂದ ಜ್ಞಾನ ಶಕ್ತಿ ವೃದ್ಧಿಸುತ್ತದೆ. ಉಚ್ಚ ಶಿಕ್ಷಣ ಪಡೆದರೆ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಬಹುದು ಎಂದು ಮಂಗಳೂರು ಡಯೋಸಿಸ್ ವಿಕಾರ್ ಜನರಲ್ ಹಾಗೂ ಮಂಗಳೂರು ಕೆಥೋಲಿಕ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರೆವರೆಂಡ್ ಮೆಸ್ಸೆಂಜರ್ ಮಾಕ್ಸಿಂ ನೊರೋನ್ನಾ ಹೇಳಿದರು.
ಶುಕ್ರವಾರ ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಪಿ.ಎಚ್.ಡಿ. ಪದವಿ ಪಡೆದ ಪುರುಷೋತ್ತಮ್ ಕೆ.ವಿ., ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಫಾ. ಜಯಪ್ರಕಾಶ್, ಕಾಲೇಜು ಹಳೆ ವಿದ್ಯಾರ್ಥಿಗಳಾದ, ಸಿ.ಎ. ಪದವಿ ಪಡೆದ ಸುಜೀತ್ ವಿ. ಶೆಟ್ಟಿ, ಚಲನ ಚಿತ್ರ ನಟಿ ಅಮೃತಾ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ತಿಲಕ್ ಗೌಡ ಅವರನ್ನು ಗೌರವಿಸಲಾಯಿತು.
ಪೊಂಪೈ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ. ವಿಕ್ಟರ್ ಡಿಮೆಲ್ಲೊ, ಕಿರೆಂ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಬರ್ಟನ್ ಸಿಕ್ವೇರಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಬೆನೆಡಿಕ್ಟಾ ದಾಂತೀಸ್, ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಆಚಾರ್ಯ ಉಪಸ್ಥಿತರಿದ್ದರು.
ಉಪನ್ಯಾಸಕ ಮಂಜುನಾಥ್ ಎಸ್.ಎ ಸ್ವಾಗತಿಸಿದರು. ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ್ ಹೊಳ್ಳ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ಸಂಚಾಲಕ ಯೋಗೇಂದ್ರ ಬಿ. ವಂದಿಸಿದರು. ಕಾಲೇಜು ವಿದ್ಯಾರ್ಥಿಗಳಾದ ಗೇವಿನ್ ಡಿಸೋಜ, ಡಾಪ್ನಿ ಗೋವಿಸ್ ಮತ್ತು ಕಾರೋಲ್ ಸ್ವೀಟಿ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Kinnigoli-08031901 Kinnigoli-08031902

Comments

comments

Comments are closed.

Read previous post:
ಕೊಡೆತ್ತೂರು ವರ್ಷಾವಧಿ ಜಾತ್ರಾ ಮಹೋತ್ಸವ

ಕಿನ್ನಿಗೋಳಿ : ಕೊಡೆತ್ತೂರು ಶ್ರೀ ಅರಸುಕುಂಜರಾಯ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮಾರ್ಚ್ 8 ರಿಂದ 11 ರವರೆಗೆ ನಡೆಯಲಿದೆ. ಮಾ. 8 ರಂದು ಬೆಳಿಗ್ಗೆ 8.30 ಗಂಟೆಗೆ ಭಂಡಾರ ಸ್ಥಾನದಿಂದ ಅರಸು ಕುಂಜರಾಯರ...

Close