ಮಲ್ಲಿಗೆಯಂಗಡಿ – ಶಿಬರೂರು ಸೇತುವೆ ಶಿಲಾನ್ಯಾಸ

ಕಿನ್ನಿಗೋಳಿ : ಮಂಗಳೂರು ತಾಲೂಕು ಸೋರಿಂಜೆ ಗ್ರಾಮ ಪಂಚಾಯಿತಿಯ ದೇಲಂತಬೆಟ್ಟು ಹಾಗೂ ಕಟೀಲು ಗ್ರಾಮ ಪಂಚಾಯಿತಿಯ ಮಲ್ಲಿಗೆಯಂಗಡಿ ಹೊಸಕಟ್ಟ ಎಂಬಲ್ಲಿ ನಂದಿನಿ ನದಿಗೆ ಅಡ್ಡಲಾಗಿ ನರ್ಬಾಡ್ ಎಕ್ಸ್‌ಎಕ್ಸ್ 111 2017- 18 ಯೋಜನೆಯಡಿ ಸುಮಾರು 1,10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆಯ ಶಿಲಾನ್ಯಾಸವನ್ನು ತೆಂಗಿನ ಕಾಯಿ ಒಡೆಯುವ ಮೂಲಕ ಕಂದಾಯ ಸಚಿವ ಆರ್. ವಿ ದೇಶಪಾಂಡೆ ಶುಕ್ರವಾರ ನೆರವೇರಿಸಿದರು.
ಈ ಸಂದರ್ಭ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷ್ಯತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸೂರಿಂಜೆ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ದಯಾನಂದ, ಉಪಾಧ್ಯಕ್ಷ ಜಿತೇಂದ್ರ, ಪಂಚಾಯಿತಿ ಸದಸ್ಯರಾದ ರಝಾಕ್, ರಮಾನಂದ ಪೂಜಾರಿ. ಉಮೇಶ್ ಗುತ್ತಿನಾರ್, ವಾಸುದೇವ ಶಿಬರಾಯ, ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಹಿರಿಯರಾದ ವಿಶ್ವನಾಥ ಶೆಟ್ಟಿ ಕೊಡೆತ್ತೂರು, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಧನಂಜಯ ಕೋಟ್ಯಾನ್ ಮಟ್ಟು, ತಿಮ್ಮಪ್ಪ ಕೋಟ್ಯಾನ್ , ವಸಂತ್ ಬೆರ್ನಾಡ್, ಶಾಲೆಟ್ ಪಿಂಟೋ, ಪ್ರಮೋದ್ ಕುಮಾರ್, ಮೋನಪ್ಪ ಶೆಟ್ಟಿ ಎಕ್ಕಾರು, ಸುಬ್ರಮಣ್ಯ ಪ್ರಸಾದ್, ಬಾಸ್ಕರದಾಸ್ ಎಕ್ಕಾರು, ಪ್ರೇಮರಾಜ್ ಬರ್ಕೆ, ಪ್ರದ್ಯುಮ್ನ ರಾವ್, ರಾಜೇಂದ್ರ ಶೆಟ್ಟಿ, ವಿನೀತ್ ಶೆಟ್ಟಿ, ಕೇಶವ ಶೆಟ್ಟಿ, ಪುರುಶೋತ್ತಮ ಶೆಟ್ಟಿ, ತಬುರ ಪೂಜಾರಿ, ಬಾಬು ಕೋಟ್ಯಾನ್, ಬಾಲಕೃಷ್ಣ ಮೂಲ್ಯ ಉಮೇಶ್ ಎನ್ ಶೆಟ್ಟಿ, ಗೀತಾ ಎಸ್ ಶೆಟ್ಟಿ, ಬಾಲಕೃಷ್ಣ ಶಿಬರಾಯ , ಆರ್.ಐ ದಿಲೀಪ್ ರೋಡ್ಕರ್, ಗ್ರಾಮಕರಣಿಕ ಪ್ರದೀಪ್ ಶಣೈ, ಸುರೇಶ್, ನವೀನ್ ಕುಮಾರ್ ಕಟೀಲ್ , ಸುಧಾಕರ ಶೆಟ್ಟಿ ಶಿಬರೂರು, ಪ್ರಭಾಕರ ಶೆಟ್ಟಿ ಮೂಡುಮನೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-08031906

Comments

comments

Comments are closed.

Read previous post:
Kinnigoli-08031903
ಆಕಸ್ಮಿಕ ಬೆಂಕಿ ಮನೆ ಬೆಂಕಿಗಾಹುತಿ

ಕಿನ್ನಿಗೋಳಿ : ಆಕಸ್ಮಿಕ ಬೆಂಕಿ ಅವಘಡದಿಂದ ಮನೆ ಬೆಂಕಿಗಾಹುತಿಯಾದ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆಯಲ್ಲಿ ನಡೆದಿದೆ. ಏಳಿಂಜೆ ಶಾಲೆ ಬಳಿಯ ಹೆಲೆನ್ ಡಿ ಅಲ್ಮೆಡಾ ಅವರ ಹಂಚಿನ ಮನೆಯಲ್ಲಿ...

Close