ಮುಲ್ಕಿ ಮೂರುಕಾವೇರಿ ರಾಜ್ಯ ಹೆದ್ದಾರಿ ರಸ್ತೆ

ಕಿನ್ನಿಗೋಳಿ : ಮೂರುಕಾವೇರಿಯಿಂದ ಮೂಲ್ಕಿವರೆಗೆ 2015/16 ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಲ್ಲಿ ಡಾಮರೀಕರಣಗೊಂಡ ರಸ್ತೆಯನ್ನು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಉದ್ಘಟಿಸಿದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಮಾಜಿ ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷ್ಯತ್ ಸದಸ್ಯ ಹರೀಶ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಸುಕುಮಾರ್ ಸನೀಲ್, ಕಿನ್ನಿಗೋಳಿ ಪಂಚಾಯಿತಿ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಸದಸ್ಯ ಚಂದ್ರಶೇಖರ್, ಸುನೀತಾ, ಎ.ಪಿ.ಎಂ.ಸಿ ಸದಸ್ಯ ಪ್ರಮೋದ್ ಕುಮಾರ್, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ವಸಂತ್ ಬೆರ್ನಾಡ್ , ದ.ಕ.ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಿಶೋರ್ ಶೆಟ್ಟಿ ದೆಪುಣಿಗುತ್ತು, ಶೈಲಾ ಸಿಕ್ವೇರ, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ಸುನೀಲ್ ಸಿಕ್ವೇರ ಜೊಸ್ಸಿ ಪಿಂಟೋ, ಅರೀಫ್, ಹಕೀಂ ಕಾರ್ನಾಡ್, ಟಿ.ಕೆ ಅಬ್ದುಲ್ ಖಾದರ್, ಭರತ್ ರಾಜ್, ರಜಾಕ್ ಸೂರಿಂಜೆ, ಇಂಜಿನೀಯರ್ ರವಿಕುಮಾರ್, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿ ಡಾಮರೀಕರಣಗೊಂಡ ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕನಾದ ನನಗೆ ಆಹ್ವಾನ ನೀಡದೆ ನನ್ನನ್ನು ನಿರ್ಲಕ್ಷಿಸಲಾಗಿದೆ. ಕಿನ್ನಿಗೋಳಿ ಮೂಲ್ಕಿ ರಸ್ತೆ ಕಾಮಗಾರಿ ಇನ್ನೂ ಸಂಪೂರ್ಣಗೊಂಡಿಲ್ಲ, ಆದರೂ ತರಾತುರಿಯಲ್ಲಿ ಇಂದು ಸಚಿವರಿಂದ ಉದ್ಘಾಟಿಸಲಾಗಿದೆ. ಯಾವುದೇ ಅಧಿಕಾರಿಗಳು ರಸ್ತೆ ಉದ್ಘಾಟನೆಯ ಬಗ್ಗೆ ನನಗೆ ಮಾಹಿತಿ ನೀಡಿಲ್ಲ, ನಾನು ಶಾಸಕನಾಗಿ ಆಯ್ಕೆಯಾಗಿ ಕೆಲವು ತಿಂಗಳು ಕಳೆದಿದೆ ಆದರೆ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಿಲ್ಲ, ಆದರೆ ಕಾಂಗ್ರೇಸ್ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುತ್ತಿದೆ ಇದು ಸರಿಯಾದ ಕ್ರಮವಲ್ಲ.

ಉಮಾನಾಥ ಕೋಟ್ಯಾನ್ ಶಾಸಕರು ಮೂಲ್ಕಿ ಮೂಡಬಿದ್ರೆ

Kinnigoli-08031907

Comments

comments

Comments are closed.