ಸಸಿಹಿತ್ಲು- ಮುಕ್ಕ ಸಂಪರ್ಕ ರಸ್ತೆ ಉದ್ಘಾಟಣೆ

ಕಿನ್ನಿಗೋಳಿ : ಕೇಂದ್ರ ಸರಕಾರದ ರಾಷ್ಟ್ರೀಯ ಚಂಡಮಾರುತ ವಿಪತ್ತು ನಿರ್ವಹಣೆ ಯೋಜನೆಯಡಿಯಲ್ಲಿ ಕರಾವಳಿಯ ಹೆಚ್ಚಿನ ಗ್ರಾಮೀಣ ರಸ್ತೆಗಳು ಕಾಂಕ್ರೀಟಿಕರಣಗೊಂಡು ಶಾಶ್ವತ ಅಭಿವೃದ್ಧಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಸಸಿಹಿತ್ಲು ಶ್ರೀ ಭಗವತಿ ಅಮ್ಮನವರ ದೇವಾಲಯದ ಸನಿಹ ರೂ 4.40 ಕೋಟಿ ರೂ ವೆಚ್ಚದ ಸಸಿಹಿತ್ಲು- ಮುಕ್ಕ ಕಾಂಕ್ರೀಟ್ ಸಂಪರ್ಕ ಶುಕ್ರವಾರ ರಸ್ತೆ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರ ಯೋಜನೆಗಳು ಶೀಘ್ರ ರೀತಿಯಲ್ಲಿ ಕಾರ್ಯಗತಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಮಾಣಿಕ ಆಡಳಿತ ಕಾರಣವಾಗಿದೆ ಕಳೆದ 6ತಿಂಗಳ ಹಿಂದೆ ಈ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ್ದೆ ಇಂದು ನಾನೇ ಉದ್ಘಾಟಿಸಿದ್ದೇನೆ. ಎನ್.ಡಿ.ಆರ್.ಎಫ್ ಯೋಜನೆಯಡಿ ದ.ಕ ಜಿಲ್ಲೆಗೆ 68 ಕೋಟಿ ರೂ ಅನುದಾನ ನೀಡಲಾಗಿದೆ ಹಾಗೂ ಕರಾವಳಿಯ 11 ವಿಧಾನ ಸಭಾ ಕ್ಷೇತ್ರಗಳಿಗೆ ತಲಾ 6 ಕೋಟಿ ರೂ ಅನುದಾನ ಕೇಂದ್ರ ದಿಂದ ನೀಡಲಾಗಿದೆ ಅದನ್ನು ಸ್ಥಳಿಯ ಶಾಸಕರ ನೇತ್ರತ್ವದಲ್ಲಿ ಬಳಸಲಾಗುವುದು.
ಕೇಂದ್ರ ಹಾಗೂ ರಾಜ್ಯದ ಸಮಭಾಗಿತ್ವದಲ್ಲಿ ಬಹಳಷ್ಟು ಯೋಜನೆಗಳು ಆರಂಭ ಗೊಳ್ಳಲಿದ್ದು ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದರು.
ಈ ಸಂದರ್ಭ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಸುರತ್ಕಲ್ ಶಾಸಕ ಡಾ. ಭರತ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯರಾದ ಜೀವನ್ ಪ್ರಕಾಶ್ ಕಾಮೆರೊಟ್ಟು ಮತ್ತು ವಜ್ರಾಕ್ಷಿ ಶೆಟ್ಟಿ, ಪಡುಪಣಂಬೂರು ಗ್ರಾಮ ಪಂ ಅಧ್ಯಕ್ಷ ಮೋಹನ್‌ದಾಸ್, ಸದಸ್ಯ ವಿನೋದ್ ಸಾಲ್ಯಾನ್, ಹಳೆಯಂಗಡಿ ಗ್ರಾಮ ಪಂ ಸದಸ್ಯರಾದ ಚಿತ್ರಾ ಸುಖೇಶ್, ಆನಂದ, ಬೇಬಿ, ಸುಲೋಚನಾ, ಮೂಲ್ಕಿ ಮೂಡಬಿದ್ರೆ ಮಂಡಲದ ಅಧ್ಯಕ್ಷ ಈಶ್ವರ ಕಟೀಲು, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಆದರ್ಶ ಎಕ್ಕಾರು. ಮಾಧವ ತಿಂಗಳಾಯ, ರಾಮಚಂದ್ರ ಶೆಣೈ, ಮನೋಜ್ ಕುಮಾರ್ ಕೆಲೆಸಿಬೆಟ್ಟು, ಸೂರ್ಯ ಕಾಂಚನ್, ಆನಂದ ಸುವರ್ಣ, ಸುಭಾಶ್ ಕರ್ಕೇರಾ, ಮಹಾಬಲ ಅಂಚನ್, ಉದಯ ವಿ.ಸುವರ್ಣ, ವಚನ್ ಮಾಣೈ, ಕಮಲಾಕ್ಷ ಕಕ್ವ, ವಾಸುದೇವ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಮೀನುಗಾರರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶೋಭೇಂದ್ರ ಸಸಿಹಿತ್ಲು ನಿರೂಪಿಸಿದರು.

Kinnigoli-08031909

Comments

comments

Comments are closed.

Read previous post:
Kinnigoli-08031908
ಕಟೀಲು – ಆರ್.ವಿ. ದೇಶಪಾಂಡೆ ಭೇಟಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಭೇಟಿ ನೀಡಿದರು. ದೇವಳದ ವತಿಯಿಂದ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷ ವಸ್ತ್ರ, ಪ್ರಸಾದ ನೀಡಿ...

Close