ಆಕಸ್ಮಿಕ ಬೆಂಕಿ ಮನೆ ಬೆಂಕಿಗಾಹುತಿ

ಕಿನ್ನಿಗೋಳಿ : ಆಕಸ್ಮಿಕ ಬೆಂಕಿ ಅವಘಡದಿಂದ ಮನೆ ಬೆಂಕಿಗಾಹುತಿಯಾದ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆಯಲ್ಲಿ ನಡೆದಿದೆ. ಏಳಿಂಜೆ ಶಾಲೆ ಬಳಿಯ ಹೆಲೆನ್ ಡಿ ಅಲ್ಮೆಡಾ ಅವರ ಹಂಚಿನ ಮನೆಯಲ್ಲಿ ಗುರುವಾರ ಸಂಜೆ 4 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಮನೆಯಲ್ಲಿ ಹೆಲೆನ್ ಡಿ ಅಲ್ಮೆಡಾ ಮಲಗಿದ್ದರಿಂದ ತಡವಾಗಿ ಬೆಂಕಿಯ ಕೆನ್ನಲಗೆ ಕಂಡ ಹೆಲೆನ್ ಅಲ್ಮೆಡಾ ಸ್ಥಳೀಯರಿಗೆ ಮಾಹಿತಿ ನೀಡಿದರು. ಸ್ಥಳೀಯರು ಕೂಡಲೇ ಮೂಲ್ಕಿ ಪೂಲೀಸರಿಗೆ ಮತ್ತು ಮೂಡಬಿದ್ರೆ ಅಗ್ನಿ ಶಾಮಕದವರಿಗೆ ಮಾಹಿತಿ ನೀಡಿದ್ದು, ಸ್ಥಳೀಯರ ಸಹಕಾರದಿಂದ ಅಗ್ನಿ ಶಾಮಕದವರು ಬೆಂಕಿಯನ್ನು ನಂದಿಸಿದರು. ಮನೆಯ ಒಳಗಿದ್ದ ಟೀವಿ ಸ್ಫೋಟಗೊಂಡಿದ್ದು, ಪ್ಯಾನ್ ಮತ್ತಿತರ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದೆ, ಕಪಾಟಿನಲ್ಲಿದ್ದ ಸೀರೆ ಮತ್ತಿತರ ಅಮೂಲ್ಯ ವಸ್ತುಗಳು ಸುಟ್ಟು ಹೋಗಿದ್ದು ಹಂಚಿನ ಮನೆಯಾದರಿಂದ ಮನೆಯ ಒಳಗಿನ ಮುಚ್ಚಿಗೆ ಸುಟ್ಟುಹೋಗಿದ್ದು ಸುಮಾರು 7 ಲಕ್ಷರೂಪಾಯಿ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮೂಲ್ಕಿ ಪೋಲಿಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದ್ದು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

Kinnigoli-08031903 Kinnigoli-08031904 Kinnigoli-08031905

Comments

comments

Comments are closed.

Read previous post:
Kinnigoli-08031901
ಕಲಿಕೆ ಮತ್ತು ಸತತ ಪಯತ್ನದಿಂದ ಜ್ಞಾನ ಶಕ್ತಿ ವೃದ್ದಿ

ಕಿನ್ನಿಗೋಳಿ : ಏಕಾಗ್ರತೆಯ ಕಲಿಕೆ ಮತ್ತು ಸತತ ಪಯತ್ನದಿಂದ ಜ್ಞಾನ ಶಕ್ತಿ ವೃದ್ಧಿಸುತ್ತದೆ. ಉಚ್ಚ ಶಿಕ್ಷಣ ಪಡೆದರೆ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಬಹುದು ಎಂದು ಮಂಗಳೂರು ಡಯೋಸಿಸ್ ವಿಕಾರ್ ಜನರಲ್...

Close