ಕಟೀಲು : ವಿಶ್ವ ಮಹಿಳಾ ದಿನಾಚರಣೆ 2019

ಕಿನ್ನಿಗೋಳಿ : ಮಕ್ಕಳಿಗೆ ಯಕ್ಷಗಾನ ತರಬೇತಿ ಕೊಟ್ಟು ಸಂಸ್ಕ್ರತಿಯ ಬಗ್ಗೆ ಅರಿವನ್ನು ಮೂಡಿಸಲು ಮುಂದಾಗಿರುವುದು ಅಭಿನಂದನೀಯ ಎಂದು ಯಕ್ಷಗಾನ ಕಲಾವಿದೆ ಸುಮ ಕೃಷ್ಣ ಕಲ್ಲೋಡಿ ಹೇಳಿದರು
ಗೆಳೆಯರ ಬಳಗ ಕಟೀಲು, ಯುವಕ ಯುವತಿ ಮತ್ತು ಯಕ್ಷಗಾನ ಮಂಡಳಿ ಕಟೀಲು, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಕಟೀಲು ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ 2019 ಹಾಗೂ ಮಹಿಳಾ ಮಂಡಲ ಮತ್ತು ಯಕ್ಷಗಾನ ತರಬೇತಿ ಕೇಂದ್ರದ ಉದ್ಘಟನೆ ನೆರವೇರಿಸಿ ಮಾತನಾಡಿ ಯಕ್ಷಗಾನ ಮುಮ್ಮೇಳ ಮತ್ತು ಹಿಮ್ಮೇಳಗಳಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದಾರೆ. ಮಹಿಳೆಯರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಇದೆ ಅದನ್ನು ತಿಳಿದು ಮಹಿಳೆಯರು ಮುನ್ನಡೆಯಬೇಕು ಎಂದರು.
ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು
ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಲೋಕಯ್ಯ ಸಾಲಿಯಾನ್, ಕಟೀಲು ಹಾಲು ಉತ್ಪದಾಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಪುಷ್ಪಾ ಶೆಟ್ಟಿ, ಗೆಳೆಯರ ಬಳಗದ ಅಧ್ಯಕ್ಷ ಸಂಜಯ್ ಕಟೀಲು, ಸಂಚಾಲಕ ಸಂಜೀವ ಕಟೀಲು, ಮಹಿಳಾ ಮಂಡಲದ ಅಧ್ಯಕ್ಷೆ ಜಯಂತಿ, ಪಂಚಾಯಿತಿ ಸದಸ್ಯರಾದ ಪುಷ್ಪಾ ಜಯಂತಿ ಕುಮಾರ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತ್ ಪೂಜಾರಿ ಸ್ವಾಗತಿಸಿ, ಹರಿಣಾಕ್ಷಿ ವಂದಿಸಿದರು. ಯಶೋಧ ಕಾರ್ಯಕ್ರಮ ನಿರೂಪಿಸಿದರು.

Kinnigoli-09031901

Comments

comments

Comments are closed.

Read previous post:
Kinnigoli-09031904
ಹರಿಪಾದೆ : ನೂತನ ನೀರಿನ ಟ್ಯಾಂಕ್ ಶಿಲನ್ಯಾಸ

ಕಿನ್ನಿಗೋಳಿ : ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಪಾದೆಯಲ್ಲಿ ೫ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ನೀರಿನ ಟ್ಯಾಂಕ್...

Close