ಕಿನ್ನಿಗೋಳಿ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಸರಕಾರ ಮಹಿಳೆಯರಿಗೆ ಶೈಕ್ಷಣಿಕ ಹಾಗೂ ಆರ್ಥಿಕ ಪ್ರತಿ ಹೊಂದಲು ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಭ್ರಾಮರೀ ಮಹಿಳಾ ಸಮಾಜ(ರಿ.) ಮೆನ್ನಬೆಟ್ಟು – ಕಿನ್ನಿಗೋಳಿ ಇವುಗಳ ಜಂಟಿ ಆಶ್ರಯದಲ್ಲಿ ಯುಗಪುರುಷ ಸಭಾ ಭವನದಲ್ಲಿ ಜರಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತಾಡಿದರು.
ಕಿನ್ನಿಗೋಳಿ ಭ್ರಾಮರೀ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿವೆ, ಮಹಿಳೆಯರಿಂದಲೇ ಮಹಿಳೆಗೆ ದೌರ್ಜನ್ಯ ಆಗಬಾರದು. ಮಹಿಳೆ ಕುಟುಂಬದ ಬೆನ್ನೆಲುಬು ಎಂದು ಹೇಳಿದರು.
ಈ ಸಂದರ್ಭ ಮಹಿಳಾ ಹಾಗೂ ಮಕ್ಕಳ ಇಲಾಖೆಯ ನಾಗರತ್ನ, ಅಂಗನವಾಡಿ ಮೇಲ್ವಿಚಾರಕಿ ಕಾತ್ಯಾಯಿನಿ, ಕಿನ್ನಿಗೋಳಿ ಸಂಜೀವಿನಿ ಸಂಸ್ಥೆ ಸಂಯೋಜಕಿ ಭಗಿನಿ ಅಮಿತಾ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಭ್ರಾಮರೀ ಮಹಿಳಾ ಸಮಾಜದ ಕಾರ್ಯದರ್ಶಿ ಅನುಷಾ ಸ್ವಾಗತಿಸಿದರು. ಮಂಗಳೂರು ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕ ವಿಲಿಯಂ ಸಾಮ್ಯುವೆಲ್ ಪ್ರಸ್ತಾವನೆಗೈದರು. ಪ್ರಜ್ಞಾ ಸಲಹಾ ಕೇಂದ್ರದ ಮೇಲ್ವಿಚಾರಕಿ ರೇಶ್ಮಾ ಜೋಗಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮೇವಿಸ್ ಡಿ.ಸೋಜ ವಂದಿಸಿದರು. ನಿರ್ಮಲ ಕಾರ್ಯಕ್ರಮ ನಿರೂಪಿಸಿದರು.

Kinnigoli-09031903

Comments

comments

Comments are closed.

Read previous post:
Kinnigoli-09031902
ಶಾಂತಿಪಲ್ಕೆ ಮಹಾಂಕಾಳಿ ದೈವದ ನೇಮ

ಕಿನ್ನಿಗೋಳಿ : ಶಾಂತಿಪಲ್ಕೆ ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮದ ಪ್ರಯುಕ್ತ ಶ್ರೀ ಮಹಾಂಕಾಳಿ ದೈವದ ನೇಮ ನಡೆಯಿತು.

Close