ದ.ಕ. ಜಿಲ್ಲಾಉಸ್ತುವಾರಿ ಸಚಿವರು ಕ್ಷಮೆ ಯಾಚಿಸಬೇಕು

ಕಿನ್ನಿಗೋಳಿ : ಶುಕ್ರವಾರ ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕಿನ್ನಿಗೋಳಿಯಲ್ಲಿ ನಡೆಸಿದ ಮೂಲ್ಕಿ-ಮೂರುಕಾವೇರಿ ರಾಜ್ಯ ಹೆದ್ದಾರಿ ರಸ್ತೆ ಉದ್ಘಾಟನಾ ಸಮಾರಂಭಕ್ಕೆ ಸ್ಥಳೀಯ ಶಾಸಕರನ್ನು ಕಡೆಗಣಿಸಿ ಆಹ್ವಾನ ನೀಡದೇ ನಿರ್ಲಕ್ಷಿಸಿ ಅವಮಾನಿಸಿದ್ದಾರೆ ಎಂದು ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲು ಆರೋಪಿಸಿದ್ದಾರೆ. ಕಿನ್ನಿಗೋಳಿಯ ಯುಗಪುರುಷದ ಸಭಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕಿನ್ನಿಗೋಳಿಯಲ್ಲಿ 12 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಡಾಮರೀಕರಣಗೊಂಡ ರಜ್ಯ ಹೆದ್ದಾರಿ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿದ್ದು ಸರ್ಕಾರದ ಅನುದಾನದಲ್ಲಿ ಮಂಜೂರಾದ ಕಾಮಗಾರಿಯನ್ನು ಕಾಂಗ್ರೆಸ್ ಪಕ್ಷವು ತಮ್ಮ ಸ್ವಂತ ಆಸ್ತಿಯಂತೆ ಮಾಡುತ್ತಿದ್ದು ಕ್ಷೇತ್ರದ ಜನಪ್ರತಿನಿಧಿ ಉಮಾನಾಥ ಕೋಟ್ಯಾನ್ ಅವರನ್ನು ಆಹ್ವಾನಿಸದೇ ಉದ್ದಟತನದಿಂದ ಕಾರ್ಯಕ್ರಮ ನಡೆಸಿದ್ದು ಸರಿಯಲ್ಲ ಅಲ್ಲದೆ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರನ್ನು ಮೂಡುಬಿದಿರೆ ತಾಲೂಕು ಉದ್ಘಾಟನಾ ಸಮಾರಂಭಕ್ಕೂ ಆಹ್ವಾನಿಸಿಲ್ಲ. ಶಾಸಕರಿಗೆ ಆಹ್ವಾನ ನೀಡದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜರವರು ಸರ್ಕಾರಿ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ನಾಯಕರುಗಳ ಅಧೀನದಲ್ಲಿರುವಂತೆ ವರ್ತಿಸುತ್ತಿದ್ದು ಪಂಚಾಯಿತಿ ಪಿಡಿಓಗಳ ವರ್ಗಾವಣೆಯನ್ನು ಮುಖ್ಯ ಮಂತ್ರಿಯವರು ನೇರವಾಗಿ ಮಾಡುವಂತಹ ಕೀಳು ಮಟ್ಟಕ್ಕೆ ಇಳಿದಿದ್ದು ಪ್ರತಿಯೊಂದು ಕಾಮಗಾರಿಗಳಲ್ಲಿ ಕೇಂದ್ರ ಸರ್ಕಾರದ ಪಾಲಿದ್ದು ಉದ್ಘಾಟನೆ ಮತ್ತಿತರ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸುವುದು ಸರಿಯಲ್ಲ ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾವಿಸುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮೂಡುಬಿದ್ರಿ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಖೇಶ್ ಶಿರ್ತಾಡಿ, ಜಿಲ್ಲಾ ಸಮಿತಿ ಸದಸ್ಯ ಕೆ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

Comments

comments

Comments are closed.