ಪಟ್ಟೆ ಯಕ್ಷಗಾನ ಕಲಾವಿದರಿಗೆ ಸಮ್ಮಾನ

ಕಿನ್ನಿಗೋಳಿ : ಯಕ್ಷಗಾನದ ಮೂಲಕ ಮಹಾಭಾರತ ರಾಮಾಯಣ, ಮತ್ತಿತರರ ಪುರಾಣ ಕಥೆಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸುತ್ತದೆ. ಮೊಬೈಲ್, ಟಿ. ವಿ ಮಾಧ್ಯಮದಿಂದ ಸಮಾಜದ ಸ್ವಾಸ್ಥ ಹಾಳಾಗಿದೆ ಈ ಬಗ್ಗೆ ಯುವ ಜನತೆ ಜಾಗೃತಿ ಎಚ್ಚರ ಆಗತ್ಯ ಎಂದು ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಹೇಳಿದರು.
ಪಟ್ಟೆ ಶ್ರೀ ಜಾರಾಂದಾಯ ಬಂಟ ಪಡು ಗಡು ಬಾಕಿಮಾರು ಗದ್ದೆಯಲ್ಲಿ ಪಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಯಕ್ಷಗಾನ ಸೇವಾಸಮಿತಿ ರಜತ ವರ್ಷದ ಯಕ್ಷಗಾನ ಬಯಲಾಟದ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತಾನಾಡಿದರು.
ಈ ಸಂದರ್ಭ ಸೇವಾಸಮಿತಿ ಆಶ್ರಯದಲ್ಲಿ ರಜತ ವರ್ಷದ ವರ್ಷದ ಯಕ್ಷಗಾನ ಬಯಲಾಟ ರಜತ ಸಂಭ್ರಮದ ಸುಂಕದ ಕಟ್ಟೆ ಮೇಳದ ದೇವರಿಗೆ ಬೆಳ್ಳಿ ಕಿರೀಟ ಸರ್ಮಪಿಸಲಾಯಿತು.
ಮೇಳದ ಶ್ರೀಧರ ಮೂಡಿತ್ತಾಯ ಕಟೀಲು, ಕೊಳ್ತಿಗೆ ನಾರಾಯಣ ಗೌಡ, ರಾಜಾರಾಮ ಬಂದಾಯ ಅವರನ್ನು ಗೌರವಿಸಲಾಯಿತು. ಸ್ಥಾಪಕ ಸದಸ್ಯರಾದ ಕೇಶವ ಮಡಿಲೊಟ್ಟು, ನಾಗೇಶ್ ಕೋಟ್ಯಾನ್, ಹರೀಶ್ ಆಚಾರ್ಯ, ವಾಸು ಬಿ. ಸಾಲ್ಯಾನ್, ಶೇಖರ ಪೂಜಾರಿ, ವಸಂತ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು. ಹಾಗೂ ವಿಕಲಚೇತನರಿಗೆ ಸಹಾಯ ಧನ ವಿತರಿಸಲಾಯಿತು. ವಿಧ್ಯಾರ್ಥಿ ವೇತನ ವಿತರಿಸಲಾಯಿತು.
ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಪಟ್ಟೆ ಜಾರಾಂದಾಯ ದೈವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ಅಡ್ಯಂತಾಯ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ಉಜ್ಜು ಪೂಜಾರಿ ಭಂಡಾರ ಮನೆ, ಮೇಳದ ವ್ಯವಸ್ಥಾಪಕ ಗೋಪಾಲ ಸುವರ್ಣ ಉಪಸ್ಥಿತರಿದ್ದರು.
ರಘುರಾಮ ಅಮೀನ್ ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ ಯತಿರಾಜ್ ಪೂಜಾರಿ ವಂದಿಸಿದರು. ಸಂದೀಪ್ ಕಾರ್ಯಕ್ರಮ ನಿರೂಪಿಸಿದರು.

Kinnigoli-11031905

Comments

comments

Comments are closed.

Read previous post:
Kinnigoli-11031904
ಪೊಂಜೊವುಲೆನ ತುಡರ ಪರ್ಬ

ಕಿನ್ನಿಗೋಳಿ : ಈಗಿನ ಹೆಚ್ಚಿನ ಟಿ.ವಿ ಧಾರವಾಹಿಗಳಲ್ಲಿ ಹೆಣ್ಣು ಮಕ್ಕಳನ್ನು ಬಹಳ ಕೆಟ್ಟದಾಗಿ ಚಿತ್ರಿಸುತ್ತಿದ್ದಾರೆ. ಅದರ ವಿರುದ್ದ ಧ್ವನಿ ಎತ್ತಬೇಕು ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ...

Close