ಪೊಂಜೊವುಲೆನ ತುಡರ ಪರ್ಬ

ಕಿನ್ನಿಗೋಳಿ : ಈಗಿನ ಹೆಚ್ಚಿನ ಟಿ.ವಿ ಧಾರವಾಹಿಗಳಲ್ಲಿ ಹೆಣ್ಣು ಮಕ್ಕಳನ್ನು ಬಹಳ ಕೆಟ್ಟದಾಗಿ ಚಿತ್ರಿಸುತ್ತಿದ್ದಾರೆ. ಅದರ ವಿರುದ್ದ ಧ್ವನಿ ಎತ್ತಬೇಕು ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ ಶೆಟ್ಟಿ ಹೇಳಿದರು.
ತೊಕೂರು ಕಂಬಳಬೆಟ್ಟು ಶ್ರೀದೇವಿ ಮಹಿಳಾ ಮಂಡಲದ ವಠಾರದಲ್ಲಿ ಶ್ರೀ ದೇವಿ ಮಹಿಳಾ ಮಂಡಲ ಕಂಬಳಬೆಟ್ಟು ತೋಕೂರು ಇದರ ಆಶ್ರಯದಲ್ಲಿ ನಡೆದ ಪೊಂಜೊವುಲೆನ ತುಡರ ಪರ್ಬ ಕಾರ್ಯಕ್ರಮದಲ್ಲಿ ಹೆಣ್ಣು ಮತ್ತು ಸಮಾಜ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಪ್ರತೀ ದಿನ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಟಿ.ವಿ. ಗಳಲ್ಲಿ ಮನೆ ಒಡೆಯುವಂತಹ ಧಾರವಾಹಿಗಳನ್ನೇ ಪ್ರಸಾರ ಮಾಡಿ ಟಿಆರ್‌ಪಿ ಹೆಚ್ಚಿಸುತ್ತದೆ ಅಂತಹ ಧಾರವಾಹಿಗಳನ್ನು ನೋಡುವುದನ್ನೇ ಬಿಡಬೇಕು ಅಲ್ಲದೆ ಜಾಹೀರಾತುಗಳಲ್ಲಿ ಕೂಡಾ ಹೆಣ್ಣನ್ನು ಕೀಳು ರೀತಿಯಲ್ಲಿ ಚಿತ್ರಿಸಲಾಗುತ್ತದೆ ಎಂದರು.
ಸುರತ್ಕಲ್ ಗೋವಿಂದದಾಸ ವದವಿ ಪೂರ್ವ ಕಾಲೇಜು ಉಪನ್ಯಾಸಕಿ ಜಯಂತಿ ಸಂಕಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆಣ್ಣು ಮಕ್ಕಳಿಗೆ ಸಂಸ್ಕ್ರತಿ ಸಂಸ್ಕಾರ ತಿಳಿ ಹೇಳುವ ಕಾರ್ಯ ಆಗಬೇಕು ಎಂದರು.
ಈ ಸಂದರ್ಭ ಗ್ರಾಮದ ಹಿರಿಯ ಮಹಿಳೆ ಬೇಬಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ನಿರ್ದೇಶಕಿ ಡಾ. ಜೀವಿತಾ, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್, ತೊಕೂರು ಕಂಬಳಬೆಟ್ಟು ಶ್ರೀದೇವಿ ಮಹಿಳಾ ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಮತ್ತಿತರರು ಉಪಸ್ಥತರಿದ್ದರು.
೭೫ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಶಾಲಿನಿ ಕೆಂಚನಕೆರೆ ಸ್ವಾಗತಿಸಿದರು. ವಿಮಲಾ ವರದಿ ವಾಚಿಸಿದರು. ಶಾಂತಾ ಕರ್ಕೇರ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ವಿವರ ತಿಳಿಸಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

Kinnigoli-11031904

Comments

comments

Comments are closed.

Read previous post:
Kinnigoli-11031903
ಕಟೀಲು ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಶಿಕ್ಷಣ ಸಂಸ್ಥೆಗಳ ಪ್ರವರ್ತಕ ಉದ್ಯಮಿ ಸೌಂದರ್ಯ ರಮೇಶ್ ಅವರ ಕಟೀಲು ಸೌಂದರ್ಯ ಪ್ಯಾಲೇಸ್ ನಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಮಹಿಳಾ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಸೌಂದರ್ಯ ರಮೇಶ್,...

Close