ಧಾರ್ಮಿಕ ಕ್ಷೇತ್ರಗಳಲ್ಲಿ ಶಾಂತಿ, ಭಕ್ತಿ ಹೆಚ್ಚಬೇಕು

ಕಿನ್ನಿಗೋಳಿ : ಧಾರ್ಮಿಕ ಕ್ಷೇತ್ರಗಳಲ್ಲಿ ಶಾಂತಿ, ಭಕ್ತಿ ಹೆಚ್ಚಬೇಕು. ತುಳುನಾಡಿನ ಮಣ್ಣಿನಲ್ಲಿ ಧಾರ್ಮಿಕತೆಯಿಂದ ಸಂಸ್ಕೃತಿ ಮತ್ತು ಸಂಸ್ಕಾರಗಳು ಸಂಪನ್ನಗೊಂಡಿವೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಳದಲ್ಲಿ ಮಂಗಳವಾರ 10ನೇ ತೋಕೂರು ಕಂಬಳಬೆಟ್ಟು ಪಾಣಿಲಚ್ಚಿಲ್‌ನ ಶ್ರೀ ನಾಗಬ್ರಹ್ಮ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ ವಿಶೇಷ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸಮಿತಿಯ ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು ಮಾತನಾಡಿ, ಸುಮಾರು 800 ವರ್ಷದ ಇತಿಹಾಸ ಇರುವ ಪಾಣಿಲಚ್ಚಿಲ್‌ನ ಶ್ರೀ ನಾಗಬ್ರಹ್ಮ ಕ್ಷೇತ್ರ ಸಾನ್ನಿಧ್ಯವನ್ನು ತೋಕೂರು ದೇವಳಕ್ಕೆ ಸಂಬಂಧಿಸಿದ್ದಾಗಿದ್ದು, ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಲು ಗ್ರಾಮಸ್ಥರು ನಿರ್ಧರಿಸಿರುವುದರಿಂದ ಸೂಕ್ತವಾದ ಧಾರ್ಮಿಕ ನೆಲೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ನಾಗಬ್ರಹ್ಮಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ, ಬ್ರಹ್ಮಕಲಶಾದಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವುದಕ್ಕಾಗಿ ಗ್ರಾಮಸ್ಥರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮುಷ್ಠಿ ಕಾಣಿಕೆ ಸಮರ್ಪಿಸಲಾಯಿತು.
ಯುಗಪುರುಷ ಸಮಪಾದಕ ಕೆ.ಭುವನಾಭಿರಾಮ ಉಡುಪ, ಅರ್ಚಕ ಟಿ.ಎಸ್.ಹರೀಶ್ ಬಾಯಾರಿ, ಟಿ.ಎಸ್. ಪ್ರಭಾಕರರಾವ್, ಎಸ್.ಕೋಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಕರ್ಕೇರ, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯರಾದ ಲೀಲಾ ಬಂಜನ್, ಹೇಮನಾಥ ಅಮೀನ್, ಪುಷ್ಪಾವತಿ, ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli-12031904

Comments

comments

Comments are closed.

Read previous post:
Kinnigoli-12031903
ಯುವ ಸಂಘಟನೆಗಳಿಂದ ಸಮಾಜದ ಜಾಗೃತಿ

ಕಿನ್ನಿಗೋಳಿ : ಯುವ ಸಂಘಟನೆಗಳಿಂದ ಸಮಾಜದ ಬಗ್ಗೆ ಜಾಗೃತಿ ಮೂಡಬೇಕು. ಸಮಾಜದ ಎಲ್ಲಾ ವರ್ಗದ ಜನತೆಗೂ ಸೇವೆ ನೀಡುವ ಕಲ್ಪನೆ ಬೆಳೆಯಲಿ ಎಂದು ಮೂಲ್ಕಿ ವಿಜಯಾ ಕಾಲೇಜು ಪ್ರಿನ್ಸಿಪಾಲ್...

Close