ಕ್ರೀಡೆ, ಕಲೆಗೆ ವಿಶೇಷ ಪ್ರೋತ್ಸಾಹ ಸಿಗಲಿ

ಕಿನ್ನಿಗೋಳಿ : ಕ್ರೀಡೆ ಹಾಗೂ ಕಲೆಗೆ ಗ್ರಾಮಾಂತರ ಪ್ರದೇಶದ ಸುಪ್ತ ಪ್ರತಿಭೆಗಳಿಗೆ ಸಂಘ ಸಂಸ್ಥೆಗಳು ಸೂಕ್ತ ವೇದಿಕೆ ನೀಡಬೇಕು ಎಂದು ಬೆಂಗಳೂರು ಪ್ರತಿ ರೂಪಿ ಸಂಸ್ಥೆಯ ಸಿ.ಇ.ಓ ತೋಕೂರು ಗುತ್ತು ಹರಿಪ್ರಸಾದ್ ಶೆಟ್ಟಿ ಹೇಳಿದರು.
ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ರಿಶಾಂಕ್ ದೇವಾಡಿಗ ಅವರನ್ನು ಸನ್ಮಾನಿಸಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಮುಂಬಯಿ ಉದ್ಯಮಿ ರಾಮಣ್ಣ ದೇವಾಡಿಗ, ಸ್ಪೋರ್ಟ್ಸ್ ಕ್ಲಬ್ ಗೌರವ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಉಪಾಧ್ಯಕ್ಷ ಮುಖೇಶ್ ಸುವರ್ಣ, ಕಾರ್ಯದರ್ಶಿ ಸಂತೋಷ್ ದೇವಾಡಿಗ, ಸದಸ್ಯ ಸಂಪತ್ ದೇವಾಡಿಗ, ಪ್ರಶಾಂತ್ ದೇವಾಡಿಗ, ಮಹ್ಮದ್ ಯುನೂಸ್, ಜಗದೀಶ್ ಕೋಟ್ಯಾನ್, ಕಾರ್ತಿಕ್, ಶಂಕರ್ ಪೂಜಾರಿ, ಜಗದೀಶ್ ಬೆಲ್ಚಡ, ಹರಿಪ್ರಸಾದ್ ಸುವರ್ಣ, ಶಿವ ದೇವಾಡಿಗ, ಪದ್ಮನಾಭ ಶೆಟ್ಟಿ, ವೀಕ್ಷಿತ್ ದೇವಾಡಿಗ, ಹಿಮಕರ ಕೋಟ್ಯಾನ್, ಸುಭಾಷ್ ಅಮೀನ್, ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್, ಹೇಮನಾಥ್ ಅಮೀನ್, ಮಾಜಿ ಸದಸ್ಯರಾದ ನಾರಾಯಣ ಸುವರ್ಣ, ಮುಂಬೈ ಪತ್ರಕರ್ತ ರಮೇಶ್ ಅಮೀನ್, ಪುರುಷೋತ್ತಮ ಕೋಟ್ಯಾನ್, ಪಾರ್ವತಿ ಕೃಷ್ಣ ದೇವಾಡಿಗ, ನಿತೇಶ್ ದೇವಾಡಿಗ, ರೇಶ್ಮ ದೇವಾಡಿಗ ಉಪಸಿತರಿದ್ಧರು.
ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್ ಸ್ವಾಗತಿಸಿದರು, ಕೋಶಾಧಿಕಾರಿ ದೀಪಕ್ ಸುವರ್ಣ ಸನ್ಮಾನ ಪತ್ರ ವಾಚಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-12031902

Comments

comments

Comments are closed.

Read previous post:
Kinnigoli-12031901
ಸೇವಾ ಯೋಜನೆಗಳಿಂದ ಸಂಸ್ಥೆಗೆ ಗೌರವ

ಕಿನ್ನಿಗೋಳಿ : ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಸಂಸ್ಥೆಯಿಂದ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ಸಹಕಾರ ಸಿಕ್ಕಿದೆ. ಸೇವಾ ಯೋಜನೆಗಳಿಂದ ಸಂಸ್ಥೆಗೂ ಗೌರವ ಸಿಕ್ಕಿದೆ ಎಂದು ಹಳೆಯಂಗಡಿ ಬಿಲ್ಲವ...

Close