ಸೇವಾ ಯೋಜನೆಗಳಿಂದ ಸಂಸ್ಥೆಗೆ ಗೌರವ

ಕಿನ್ನಿಗೋಳಿ : ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಸಂಸ್ಥೆಯಿಂದ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ಸಹಕಾರ ಸಿಕ್ಕಿದೆ. ಸೇವಾ ಯೋಜನೆಗಳಿಂದ ಸಂಸ್ಥೆಗೂ ಗೌರವ ಸಿಕ್ಕಿದೆ ಎಂದು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಸುವರ್ಣ ಹೇಳಿದರು.
ಹಳೆಯಂಗಡಿ ಲಯನ್ ಕ್ಲಬ್ ಮತ್ತು ಲಿಯೋ ಕ್ಲಬ್ ಹಾಗೂ ಸುರತ್ಕಲ್‌ನ ಐಮಿತ್ರ ಸಂಸ್ಥೆಯ ಸಹಕಾರದಲ್ಲಿ ಹಳೆಯಂಗಡಿ ಬಳಿಯ ೧೦ನೇ ತೋಕೂರು ಸರಕಾರಿ ಅನುದಾನಿತ ಶ್ರೀ ಸುಬ್ರಹ್ಮಣ್ಯ ಹಿ. ಪ್ರಾ.ಶಾಲೆಯಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದ ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಿಸಿ ಮಾತನಾಡಿದರು.
ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಯಶೋಧರ್ ಸಾಲ್ಯಾನ್ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು, ಪೋಷಕರು ಶಿಬಿರದ ಫಲಾನುಭವಿಗಳಾಗಿದ್ದರು.
ಹಳೆಯಂಗಡಿ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ವಾಸು ನಾಯಕ್, ಶಾಲಾ ಸಹ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಐಮಿತ್ರ ಸಂಸ್ಥೆ ಯ ಪ್ರಬಂಧಕ ಹೇಮಚಂದ್ರ. ಕೆ, ಕಣ್ಣಿನ ಶುಶ್ರೂಕಿ ಗಿಣಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಗೌರಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಬ್ರಿಜೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-12031901

Comments

comments

Comments are closed.

Read previous post:
Kinnigoli-11031907
ಸುಬ್ರಾಯ ಭಟ್ ನೆಲ್ಲಿ ತೀರ್ಥ

ಕಿನ್ನಿಗೋಳಿ : ನೆಲ್ಲಿ ತೀರ್ಥ ನಿವಾಸಿ ನೆಲ್ಲಿತೀರ್ಥ ಶ್ರೀ ಸೋಮನಾಥ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ಭಟ್ ( 75) ಅವರು ಮಾ.7 ರಂದು ನಿಧನ ಹೊಂದಿದರು. ಮೃತರು ಪುತ್ರ...

Close